ಇಹ್ಸಾನ್ ಕರ್ನಾಟಕದ ಸೇವೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ: ಸ್ಪೀಕರ್ ಯು.ಟಿ.ಖಾದರ್

ಮಂಗಳೂರು: ಉತ್ತರ ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತಂದಿರುವ ಸುನ್ನೀ ಸಂಘಟನೆಗಳ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಇಹ್ಸಾನ್ ಕರ್ನಾಟಕದ ಕಾರ್ಯಾಚರಣೆ ಶ್ಲಾಘನೀಯವಾಗಿದ್ದು, ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ.
ಇಹ್ಸಾನ್ ಕರ್ನಾಟಕ ವತಿಯಿಂದ ಜ.19, 20ರಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಜರುಗಲಿರುವ ಇಹ್ಸಾನೋತ್ಸವ ಪ್ರಯುಕ್ತ ಮಂಗಳೂರು ಹೀರಾ ಕನ್ವೆನ್ಷನ್ ಸಭಾಂಗಣದಲ್ಲಿ ನಡೆದ ಎಕ್ಸಲೆನ್ಸಿ ಮೀಟ್ ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಉತ್ತರ ಕರ್ನಾಟಕದ ಹಲವೆಡೆ ಪ್ರವಾಸಗೈದಾಗ ನನ್ನ ಗಮನಕ್ಕೆ ಬಂದ ಅಂಶವಾಗಿದೆ. 5,000 ವಿದ್ಯಾರ್ಥಿಗಳು ನೂರಾರು ಧಾರ್ಮಿಕ ಲೌಕಿಕ ಶಿಕ್ಷಣ ಸಂಸ್ಥೆಗಳು, ನೂರಾರು ಶಿಕ್ಷಕರನ್ನೊಳಗೊಂಡ ಶಿಕ್ಷಣ ಚಳವಳಿಯಾದ ಇಹ್ಸಾನ್ ಕರ್ನಾಟಕದ ಶೈಕ್ಷಣಿಕ ಚಟುವಟಿಕೆಗಳನ್ನು ನಾನು ಸರಕಾರದ ಗಮನಕ್ಕೆ ತಂದು ರಾಜ್ಯೋತ್ಸವ ಪ್ರಶಸ್ತಿ ಲಭಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಎಸ್.ಪಿ.ಹಂಝ ಸಖಾಫಿ, ಇಹ್ಸಾನ್ ಉತ್ತರ ಕರ್ನಾಟಕದಲ್ಲಿ ನಡೆಸಿದ ಶೈಕ್ಷಣಿಕ ಚಟುವಟಿಕೆಗಳಿಂದ ಬದಲಾವಣೆ ಸಾಧ್ಯವಾಗಿರುವುದು ಸುನ್ನೀ ಸಂಘಟನೆಗಳಿಗೆ ಅಭಿಮಾನವಾಗಿದೆ ಎಂದು ಅಭಿಪ್ರಾಯಪಟ್ಟರು.
ಸುನ್ನೀ ಸಂಘಟನೆಗಳ ಕೇಂದ್ರ ಯೋಜನಾ ಮಂಡಳಿ ಅಧ್ಯಕ್ಷ ಪಿ.ಪಿ.ಅಹ್ಮದ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.
ಎಸ್ಎಂಎ ರಾಜ್ಯಾಧ್ಯಕ್ಷ ಸೈಯದ್ ಇಸ್ಮಾಯೀಲ್ ತಂಙಳ್ ಉಜಿರೆ ದುಆಗೈದರು. ಇಹ್ಸಾನೋತ್ಸವ -25 ನಿರ್ದೇಶಕ ಮೌಲಾನ ಶಾಫಿ ಸ ಅದಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಇಹ್ಸಾನ್ ಮಾಡಿದ ಸೇವೆಯನ್ನು ವಿವರಿಸಿದರು.
ಇಹ್ಸಾನ್ ಇಓ ಅನ್ವರ್ ಅಸ್ಸಅದಿ ಡಾಕ್ಯುಮೆಂಟರಿ ಪ್ರದರ್ಶನ ಮೂಲಕ ಅಲ್ಲಿನ ಸ್ಥಿತಿಗತಿಗಳನ್ನು ಮಂಡಿಸಿದರು. ಇಹ್ಸಾನ್ -2030 ಭವಿಷ್ಯದ ಯೋಜನೆಗಳನ್ನು ಇಹ್ಸಾನೋತ್ಸವ -25 ಜನರಲ್ ಕನ್ವೀನರ್ ಡಾ.ಶೇಖ್ ಬಾವ ಮಂಗಳೂರು ಮಂಡಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನಾಸಿರ್ ಲಕ್ಕಿಸ್ಟಾರ್, ಜಂಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಎಸ್.ಎಂ.ಎ. ರಾಜ್ಯ ಉಪಾಧ್ಯಕ್ಷ ಹಮೀದ್ ಹಾಜಿ ಕೊಡುಂಗಾಯಿ, ಎಕ್ಸಲೆನ್ಸಿ ಚೆಯರ್ ಮ್ಯಾನ್ ಹಾಜಿ ಶಾಕಿರ್ ಐಸಂ, ಕನ್ವೀನರ್ ಬಿಜಿ ಹನೀಫ್ ಹಾಜಿ ಉಳ್ಳಾಲ, ಮುಸ್ಲಿಮ್ ಜಮಾಅತ್ ಜಿಲ್ಲಾಧ್ಯಕ್ಷ ಆಲಿಕುಂಞಿ ಪಾರೆ, ಕೆಸಿಎಫ್ ಇಹ್ಸಾನ್ ಐಸಿ ಕಾರ್ಯದರ್ಶಿ ಇಕ್ಬಾಲ್ ಕಾಜೂರು ದುಬೈ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು, ಕೆ.ಎಂ.ಸಿದ್ದೀಕ್ ಮೋಂಟುಗೋಳಿ ಮೊದಲಾದವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಹನೀಫ್ ಹಾಜಿ ಬಜ್ಪೆ, ಎಂಬಿಎಂ ಸಾದಿಕ್ ಮಲೆಬೆಟ್ಟು, ಅಬ್ದುಲ್ ರಹ್ಮಾನ್ ರಝ್ವಿ ಕಲ್ಕಟ್ಟ, ಅಶ್ರಫ್ ಕಿನಾರ, ಹಸೈನಾರ್ ಆನೆಮಹಲ್, ಸುಬ್ಹಾನ್ ಹೊನ್ನಾಳ, ಬದ್ರುದ್ದೀನ್ ಬಜ್ಪೆ, ಕೆಸಿಎಫ್ ನಾಯಕಾರಾದ ಸ್ವಾಲಿಹ್ ಬೆಳ್ಳಾರೆ, ಹಂಝ ಮೈಂದಾಳ, ಅಶ್ರು ಬಜ್ಪೆ, ಅನ್ವರ್ ಹಾಜಿ ಗೂಡಿನಬಳಿ, ಸೈಯದ್ ಖುಬೈಬ್ ತಂಙಳ್, ಕೋ ಆರ್ಡಿನೇಟರ್ ಗಳಾದ ಅಶ್ರಫ್ ಕಿನಾರ ಮಂಗಳೂರು, ಸಲೀಂ ಕನ್ಯಾಡಿ ಮೊದಲಾದವರು ಉಪಸ್ಥಿತರಿದ್ದರು.
ಇಹ್ಸಾನ್ ಕರ್ನಾಟಕ ಅಧ್ಯಕ್ಷ ಎಂ.ವೈ.ಅಬ್ದುಲ್ ಹಫೀಳ್ ಸಅದಿ ಸ್ವಾಗತಿಸಿದರು. ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ವಂದಿಸಿದರು.

