ಅ.29ರಂದು ಮೆರಾಲ್ಡಾ ಜ್ಯುವೆಲ್ಸ್ ಉದ್ಘಾಟನೆ

ಮಂಗಳೂರು, ಅ. 27: ಚಿನ್ನ, ವಜ್ರ, ರತ್ನ, ಪೋಲ್ಕಿ ಮತ್ತು ಪ್ಲಾಟಿನಂ ಆಭರಣ ಮಳಿಗೆಗಳಲ್ಲಿ ಆಭರಣ ಉದ್ಯಮದಲ್ಲಿ ಹೆಸರು ಮಾಡಿರುವ ಮೆರಾಲ್ಡಾ ಜ್ಯುವೆಲ್ಸ್ ಮಂಗಳೂರಿನ ಬಲ್ಮಠದಲ್ಲಿ ತನ್ನ 4ನೆ ಶಾಖೆ ಕಾರ್ಯಾರಂಭಕ್ಕೆ ಸಿದ್ಧಗೊಂಡಿದೆ.
ಅ.29ರಂದು ಬೆಳಗ್ಗೆ 11.30ಕ್ಕೆ ಉದ್ಘಾಟನೆ ನಡೆಯಲಿದ್ದು, ಚಲನಚಿತ್ರ ನಟಿ ಅತಿಯಾ ಶೆಟ್ಟಿ ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಲಿದ್ದಾರೆ.
ಕೊಚ್ಚಿ, ಕ್ಯಾಲಿಕಟ್ ಮತ್ತು ಕಣ್ಣೂರಿನಲ್ಲಿ ಈಗಾಗಲೇ ಮಳಿಗೆಗಳನ್ನು ಹೊಂದಿರುವ ಮೆರಾಲ್ಡಾ ಜ್ಯುವೆಲ್ಸ್, ಸುಂದರ ಸಾಂಪ್ರದಾಯಿಕ, ಆಧುನಿಕ ಮತ್ತು ಟ್ರೆಂಡಿ ಆಭರಣಗಳ ವ್ಯಾಪಕ ಸಂಗ್ರಹದಿಂದ ಕೂಡಿದೆ. ಮಂಗಳೂರಿನ ಚಿನ್ನಾಭರಣ ಪ್ರಿಯರನ್ನು ತನ್ನ ಅತ್ಯಾಕರ್ಷಕ ವಿನ್ಯಾಸ, ಶ್ರೀಮಂತ ಕಲಾತ್ಮಕತೆಯ ಆಭರಣಗಳ ಮೂಲಕ ಆಕರ್ಷಿಸಲು ಮೆರಾಲ್ಡಾ ಜ್ಯುವೆಲ್ಸ್ ಸಿದ್ಧವಾಗಿದೆ. ಈಗಾಗಲೇ ಆಭರಣ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿರುವ ಮೆರಾಲ್ಡಾ ಜ್ಯುವೆಲ್ಸ್‌ನ ಆಭರಣಗಳಿಂದ ಮಂಗಳೂರಿಗರೂ ಹೊಸ ಅನುಭವ ಪಡೆಯಲಿದ್ದಾರೆ. ಉದ್ಘಾಟನೆಯ ಸಂದರ್ಭ ಆಕರ್ಷಕ ಆಭರಣಗಳನ್ನು ವೀಕ್ಷಿಸುವ ಅವಕಾಶ ಆಭರಣ ಪ್ರಿಯರಿಗೆ ದೊರೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.





