ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಸಂಶೋಧನಾ ಘಟಕ ಉದ್ಘಾಟನೆ

ಮಂಗಳೂರು: ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿ ರಿಸರ್ಚ್ ಸೆಲ್ ಉದ್ಘಾಟನೆ ಮತ್ತು ಹ್ಯಾಂಡ್ಸ್-ಆನ್ ಸಂಶೋಧನಾ ಕಾರ್ಯಾಗಾರ ಇತ್ತೀಚೆಗೆ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಡೆಸೆನಿಯಲ್ ಮೆಮೋರಿಯಲ್ ಹಾಲ್‌ನಲ್ಲಿ ನಡೆಯಿತು.
ನಿಟ್ಟೆ ವಿವಿಯ ನಿರ್ದೇಶಕ ಡಾ. ಪ್ರವೀಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ ಸಂಶೋಧನೆಯೊಂದಿಗೆ ಬರುವ ಪ್ರತಿಫಲಗಳಿಗಾಗಿ ಮಾತ್ರವಲ್ಲದೆ ಆಸಕ್ತಿಯಿಂದ ಸಂಶೋಧನೆ ನಡೆಸುವ ಮಹತ್ವವನ್ನು ಅವರು ಉಲ್ಲೇಖಿಸಿದರು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ. ಫಾ. ಫಾವುಸ್ಟಿನ್ ಲ್ಯೂಕಸ್ ಲೋಬೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನಾ ಕಾರ್ಯಕ್ರಮದ ನಂತರ ಕಾರ್ಯಾಗಾರವು ನಡೆಯಿತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಮುದಾಯ-ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಸುಧೀರ್ ಪ್ರಭು.ಎಚ್ , ನೆಫ್ರಾಲಜಿ ವಿಭಾಗದ ಎಚ್‌ಒಡಿ ಡಾ. ಮಂಜುನಾಥ್ ಜೆ, ಕಮ್ಯುನಿಟಿ ಮೆಡಿಸಿನ್ ವಿಭಾಗದ ಅಸೋಸಿಯೆಟ್ ಪ್ರೊಫೆಸರ್ ಡಾ. ನಿಶಾಂತ್ ಕೃಷ್ಣ . ಕೆ, ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಪ್ರಸೀನಾ, ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ರೋಗಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ. ರೇಷ್ಮಾ ಜಿ. ಕಿನಿ ಕಾರ್ಯಗಾರವನ್ನು ನಿರ್ವಹಿಸಿದರು.
ಫಾದರ್ ಮುಲ್ಲರ್ ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಎ.ಎಸ್. ಗರಿಮಾ ಗುಪ್ತಾ ಮತ್ತು ಸಹಾಯಕ ಪ್ರಾಧ್ಯಾಪಕಿ ಐಶ್ವರ್ಯಾ ಗಟ್ಟಿ ಅಧ್ಯಯನದ ಸಂಶೋಧನೆಗಳನ್ನು ಲಿಖಿತ ರೂಪದಲ್ಲಿ ಪ್ರಸ್ತುತಪಡಿಸಿದರು.
ಫಾದರ್ ಮುಲ್ಲರ್ ಕಾಲೇಜ್ ಆಫ್ ಫಿಸಿಯೋಥೆರಪಿಯ ಪ್ರಾಂಶುಪಾಲ ಪ್ರೊ.ಚೆರಿಷ್ಮಾ ಡಿಸಿಲ್ವಾ ಸ್ವಾಗತಿಸಿದರು.







