ದ.ಕ. ಜಿಲ್ಲೆಯ ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ದಿ ಮುಸ್ಲಿಂ ಸೆಂಟ್ರಲ್ ಕಮಿಟಿ
ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ವತಿಯಿಂದ ಮಂಗಳೂರಿನ ಬಂದರ್‌ನಲ್ಲಿರುವ ಕಚೇರಿಯ ಮುಂದೆ ಕಮಿಟಿಯ ಅಧ್ಯಕ್ಷ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್‌ರ ನಿರ್ದೇಶನದಂತೆ ಕಮಿಟಿಯ ಉಪಾಧ್ಯಕ್ಷ, ಮಾಜಿ ಮೇಯರ್ ಕೆ, ಅಶ್ರಫ್ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಕಾರ್ಯದರ್ಶಿಗಳಾದ ಹಾಜಿ ಅಹ್ಮದ ಬಾವ ಪಡೀಲ್, ಹಾಜಿ ರಿಯಾಝುದ್ದೀನ್, ಎಂ.ಎ. ಅಶ್ರಫ್, ಹಾಜಿ ಮಕ್ಬುಲ್ ಅಹ್ಮದ್ ಉಪಸ್ಥಿತರಿದ್ದರು.
ಸೂರಲ್ಪಾಡಿ: ಅಲ್ ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್
ಸೂರಲ್ಪಾಡಿಯ ಅಲ್ ಖೈರ್ ಇಸ್ಲಾಮಿಕ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸ್ಕೂಲ್‌ನ ಅಧ್ಯಕ್ಷ ಮುಶ್ತಾಕ್ ಅಹ್ಮದ್ ಸಾದ್ ನೆರವೇರಿಸಿದರು. ಈ ಸಂದರ್ಭ ಗೌರವಾಧ್ಯಕ್ಷ ಅಬ್ದುಲ್ ಮಜೀದ್, ಸಂಚಾಲಕ ಕೆ. ಎಚ್.ಅಲಿ. ಅಬ್ಬಾಸ್, ಪ್ರಧಾನ ಕಾರ್ಯದರ್ಶಿ ಶೈಖ್ ಮುಖ್ತಾರ್, ಸಂಯುಕ್ತ ಕಾರ್ಯದರ್ಶಿ ಶೇಖಬ್ಬ ಅಶ್ರಫ್, ಖಜಾಂಚಿ ಬಿ.ಎಸ್. ಶರೀಫ್, ಮುಖ್ಯ ಶಿಕ್ಷಕಿ ಕಲಂದರ್ ಬೀವಿ, ಅರಬಿಕ್ ವಿಭಾಗದ ಮುಖ್ಯಸ್ಥ ದಾವೂದ್ ಹುದವಿ, ಮಲ್ಹರುಲ್ ಅವಾಖಿಫ್ ಜುಮಾ ಮಸೀದಿಯ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಮೂನ್‌ಲೈಟ್, ಸಂಯುಕ್ತ ಕಾರ್ಯದರ್ಶಿ ರಫೀಕ್ ದರ್ಬಾರ್ ಮತ್ತಿತರರು ಉಪಸ್ಥಿತರಿದ್ದರು. ಸದರ್ ಉಸ್ತಾದ್ ಇಲ್ಯಾಸ್ ನಿಜಾಮಿ ಪ್ರತಿಜ್ಞಾವಿಧಿ ಬೋಧಿಸಿದರು. ಶಂಸುದ್ದೀನ್ ಹುದವಿ ಸ್ವಾಗತಿಸಿದರು. ವಿದ್ಯಾ ಕಾರ್ಯಕ್ರಮ ನಿರೂಪಿಸಿದರು. ಝಿಯಾನಾ ವಂದಿಸಿದರು. ಮಾಧವಿ ಸ್ವಾಗತಿಸಿದರು.
ಮೂಡುಶೆಡ್ಡೆ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯಾ ಮಸೀದಿ ಮತ್ತು ಮದ್ರಸ
ಮೂಡುಶೆಡ್ಡೆ ಎದುರುಪದವಿನ ಹಯಾತುಲ್ ಇಸ್ಲಾಂ ಬದ್ರಿಯಾ ಜುಮ್ಮಾ ಮಸೀದಿ ಮತ್ತು ಮದ್ರಸದ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಸೀದಿ ಮತ್ತು ಮದ್ರಸದ ಅಧ್ಯಕ್ಷ ಇಕ್ಬಾಲ್ ಎ.ಪಿ, ಮಸೀದಿಯ ಮಾಜಿ ಅಧ್ಯಕ್ಷರಾದ ಎಸ್. ಆಲಿಯಬ್ಬ, ಹಾಜಿ ಮುಹಮ್ಮದ್ ಹನೀಫ್, ಮಾಜಿ ಉಪಾಧ್ಯಕ್ಷ ಎಂ.ಡಿ. ಜಬ್ಬಾರ್, ಖತೀಬ್ ಸಫ್ವಾನ್ ಇರ್ಫಾನಿ ಮುಂಡೋಳೆ, ಉಪಾಧ್ಯಕ್ಷ ಅಬ್ದುಲ್ ರಝಾಕ್ ಎ.ಆರ್. ನೆರವೇರಿಸಿದರು. ಮದ್ರಸ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸದರ್ ಮುಅಲ್ಲಿಂ ಝುಬೇರ್ ಯಮಾನಿ, ಮುಅಲ್ಲಿಂ ಜಾಬೀರ್ ಜೌಹರಿ ಕಲ್ಲಡ್ಕ, ಜಮಾಅತ್‌ನ ಹಿರಿರಾದ ಹಾಜಿ ಹನೀಫ್ ಮೌಲವಿ, ಕಾರ್ಯದರ್ಶಿ ಸಾಜುದ್ದೀನ್, ಕೋಶಾಧಿಕಾರಿ ಇಮ್ರಾನ್ ಅಲಿ, ಮಾಜಿ ಉಪಾಧ್ಯಕ್ಷ ಮನ್ಸೂರ್, ಅಬ್ದುಲ್ ಬಶೀರ್, ಬದ್ರಿಯಾ ಯಂಗ್‌ಮೆನ್ಸ್ ಅಧ್ಯಕ್ಷ ನೌಶಾದ್, ಜಮಾಅತ್‌ನ ಜೊತೆ ಕಾರ್ಯದರ್ಶಿ ಆರೀಫ್, ಮಾಜಿ ಸದಸ್ಯ ಅಬ್ದುಲ್ ರಝಾಕ್ ಮಂದಾರ ಮತ್ತಿತರರು ಉಪಸ್ಥಿತರಿದ್ದರು.
ನಾಟೆಕಲ್ ವಿಜಯನಗರದ ಮಸ್ಜಿದುರಹ್ಮಾ
ದೇರಳಕಟ್ಟೆ ಸಮೀಪದ ನಾಟೆಕಲ್ ವಿಜಯನಗರದ ಮಸ್ಜಿದುರಹ್ಮಾ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಜಮಾಅತ್ ಅಧ್ಯಕ್ಷ ಇಸ್ಮಾಯಿಲ್ ಎನ್. ನೆರವೇರಿಸಿದರು. ಜಮಾಅತ್ ಕಮಿಟಿಯ ಹಿರಿಯ ಸದಸ್ಯ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಯೂಸುಫ್ ವಕ್ತಾರ್, ಖತೀಬ್ ಅಬೂಬಕ್ಕರ್ ಝೈನಿ ಕಾಮಿಲಿ ಸಂದೇಶ ನೀಡಿದರು. ಪ್ರಧಾನ ಕಾರ್ಯದರ್ಶಿ ಟಿ. ಇಸ್ಮಾಯಿಲ್ ಮಾಸ್ಟರ್ ಪ್ರತಿಜ್ಞಾ ಬೋಧನೆಗೈದರು. ಮದ್ರಸ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮದನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಅಝೀಝ್ ಸ್ವಾಗತಿಸಿದರು. ಕಾರ್ಯದರ್ಶಿ ಮುಹಮ್ಮದ್ ಕಮಾಲ್ ವಂದಿಸಿದರು. ಉಪಾಧ್ಯಕ್ಷ ಇಸ್ಮಾಯಿಲ್ ಕೆ.ಎಸ್. ವತಿಯಿಂದ ಸಿಹಿತಿಂಡಿ ವಿತರಿಸಲಾಯಿತು.
ಹಳೆಕೋಟೆ ಸಯ್ಯದ್ ಮದನಿ ವಿದ್ಯಾ ಸಂಸ್ಥೆ
ಉಳ್ಳಾಲ ಹಳೆಕೋಟೆಯ ಸಯ್ಯದ್ ಮದನಿ ವಿದ್ಯಾ ಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಉಳ್ಳಾಲ ಕೇಂದ್ರ ಜುಮಾ ಮಸ್ಜಿದ್‌ನ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‌ವೇ ನೆರವೇರಿಸಿದರು. ಮುಖ್ಯ ಶಿಕ್ಷಕ ಕೆ.ಎಂ.ಕೆ. ಮಂಜನಾಡಿ ಸ್ವಾಗತಿಸಿದರು. ಈ ಸಂದರ್ಭ ಶಾಲಾ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಸದಸ್ಯ ಫಾರೂಕ್ ಯು.ಎಚ್., ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರಾದ ಅಲ್ತಾಫ್ ಯು.ಎಚ್, ಹಾಜಿ ಜೈನುದ್ದೀನ್ ಹಳೆಕೋಟೆ, ಇಬ್ರಾಹೀಂ ಯು.ಎನ್, ಎಂ.ಎಚ್ ಇಬ್ರಾಹಿಂ, ಕರೀಂ ಯು.ಎಚ್. ಮತ್ತಿತರರು ಉಪಸ್ಥಿತರಿದ್ದರು.
ಬಬ್ಬುಕಟ್ಟೆ ಹಿರಾ ಸ್ಕೂಲ್
ತೊಕ್ಕೊಟ್ಟು ಸಮೀಪದ ಬಬ್ಬುಕಟ್ಟೆಯ ಹಿರಾ ಸ್ಕೂಲ್‌ನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸ್ಕೂಲ್‌ನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಬ್ದುಲ್ ಸಲಾಂ ನೆರವೇರಿಸಿದರು. ಶಾಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಚ್. ಮಹಮೂದ್, ಕಾರ್ಯದರ್ಶಿ ಅಬ್ದುಲ್ ಕರೀಂ, ಶಾಲಾ ಸಂಚಾಲಕರಾದ ಅಬ್ದುಲ್ ರಹ್ಮಾನ್ ಮತ್ತು ರೆಹಮತುಲ್ಲಾ, ಆಡಳಿತಾಧಿಕಾರಿ ಝಾಕೀರ್ ಹುಸೇನ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅದ್ನಾನ್ ಅಹ್ಮದ್ ಸ್ವಾಗತಿಸಿದರು. ಮೈಮೂನ ನುಝ ವಂದಿಸಿದರು. ಸಮ್ರ ಝೈನಬ ಕಾರ್ಯಕ್ರಮ ನಿರೂಪಿಸಿದರು.
ಕಾಟಿಪಳ್ಳ ಮಿಸ್ಬಾಹ್ ಸಮೂಹ ಶಿಕ್ಷಣ ಸಂಸ್ಥೆ
ಕಾಟಿಪಳ್ಳದ ಮಿಸ್ಬಾಹ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಸ್ಥೆಯ ಟ್ರಸ್ಟಿ, ಮಾಜಿ ಶಾಸಕ ಬಿ.ಎ.ಮೊಯ್ದಿನ್ ಬಾವ ನೇರವೇರಿಸಿದರು. ಸಂಸ್ಥೆಯ ಮುಖ್ಯಸ್ಥ ಹೈದರ್ ಅಲಿ ಅಧ್ಯಕ್ಷತೆ ವಹಿಸಿದ್ದರು. ದ.ಕ.ಸುನ್ನಿ ಸೆಂಟರ್ ಸಂಘಟನಾ ಸಮಿತಿ ಸದಸ್ಯ ಕೆ.ಮುಹಮ್ಮದ್ ರಫೀಕ್ ಸೂರಿಂಜೆ, ಉದ್ಯಮಿ ನೌಶಾದ್, ಸಂಚಾಲಕ ನಝಿರ್, ಟ್ರಸ್ಟಿ ಫಕ್ರುದ್ದೀನ್ ಬಾವಾ, ಪ್ರಾಂಶುಪಾಲರಾದ ಝಾಹಿದಾ ಜಲೀಲ್, ಮುಫೀದಾ, ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸಫಾ ಸ್ವಾಗತಿಸಿದರು. ಫಾತಿಮಾ ಝುಲ್ಫ ಕಾರ್ಯಕ್ರಮ ನಿರೂಪಿಸಿದರು.ನುಹಾ ವಂದಿಸಿದರು.
ಬಜಾಲ್ ಪಕ್ಕಲಡ್ಕ ಸ್ನೇಹ ಪಬ್ಲಿಕ್ ಶಾಲೆ
ಬಜಾಲ್ ಪಕ್ಕಲಡ್ಕದ ಸ್ನೇಹ ಪಬ್ಲಿಕ್ ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಾಜಿ ಕಾರ್ಪೊರೇಟರ್ ಪ್ರವೀಣ್ ಚಂದ್ರ ಆಳ್ವ ನೆರವೇರಿಸಿದರು. ಅಬ್ದುಲ್ ಗಫೂರ್ ಅಧ್ಯಕ್ಷತೆ ವಹಿಸಿದ್ದರು. ಸ್ನೇಹ ಪಬ್ಲಿಕ್ ಶಾಲೆಯ ಪಿಟಿಎ ಅಧ್ಯಕ್ಷ ಮುಹಮ್ಮದ್ ಪಿ.ಬಿ., ಉಪಾಧ್ಯಕ್ಷರಾದ ಸಲೀಂ ಮಲಾರ್ ಶಹನಾಝ್, ಟ್ರಸ್ಟಿ ಪಿ.ಎಸ್. ಮುಹಮ್ಮದ್ ಉಪಸ್ಥಿತರಿದ್ದರು. ದಿಹಿಯಾ ಕಿರಾಅತ್ ಪಠಿಸಿದರು. ಮುಖ್ಯ ಶಿಕ್ಷಕಿ ಕುರೇಷಾ ನುಸ್ರತ್ ಸ್ವಾಗತಿಸಿದರು. ಯೂಸುಫ್ ಪಕ್ಕಲಡ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಫ್ರಾ ಮೈಮುನಾ ಕಾರ್ಯಕ್ರಮ ನಿರೂಪಿಸಿದರು.
ಕೋಟೆಕಾರ್ ಹಿದಾಯತ್ ನಗರ ಮಸೀದಿ
ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್ ಹಿದಾಯತ್ ನಗರ, ಕೆಎಂಜೆ, ಎಸ್‌ವೈಎಸ್, ಎಸೆಸ್ಸೆಫ್ ವತಿಯಿಂದ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಖತೀಬ್ ಅಬ್ದುಲ್ ಅಝೀಝ್ ಸಅದಿ ಅಲ್‌ಅಫ್ಳಲಿ ನೆರವೇರಿಸಿ ಸಂದೇಶ ಭಾಷಣಗೈದರು. ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ವಿಧ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮ ಜರಗಿತು. ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷ ಕೆ.ಎಂ. ಅಬ್ದುಲ್ ಖಾದರ್, ಮುಹದ್ಸಿನ್ ಶಕೂರ್ ಸಅದಿ, ಸದರ್ ನೌಫಲ್ ಅಹ್ಸನಿ, ಮುಅಲ್ಲಿಂ ಫಾರೂಕ್ ಸಅದಿ ಕೊಮರಂಗಳ, ಕೆಎಂಜೆ ಅಧ್ಯಕ್ಷ ಅಬ್ದುಲ್ ಕರೀಂ, ಎಸ್‌ವೈಎಸ್ ಅಧ್ಯಕ್ಷ ಅಬ್ದುಲ್ ಸಲಾಂ, ಎಸೆಸ್ಸೆಫ್ ಅಧ್ಯಕ್ಷ ಸದಕತುಲ್ಲಾ ಉಪಸ್ಥಿತರಿದ್ದರು. ಮಸೀದಿಯ ಕಾರ್ಯದರ್ಶಿ ಸಿದ್ದೀಕ್ ಟಿ.ಎಚ್. ವಂದಿಸಿದರು.
ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂವ್ ವಿದ್ಯಾ ಸಂಸ್ಥೆ
ಕೊಣಾಜೆ ಗ್ರಾಮದ ಅಡ್ಕರೆಪಡ್ಪುವಿನಲ್ಲಿರುವ ಜಮೀಯ್ಯತುಲ್ ಫಲಾಹ್ ಗ್ರೀನ್ ವ್ಯೂವ್ ವಿದ್ಯಾ ಸಂಸ್ಥೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ದ.ಕ ಹಾಗೂ ಉಡುಪಿ ಜಿಲ್ಲಾ ಜಮಿಯ್ಯತುಲ್ ಫಲಾಹ್ ಪ್ರಧಾನ ಕಾರ್ಯದರ್ಶಿಯಾದ ಶೇಖ್ ಅಬ್ದುಲ್ ಗಫೂರ್ ನೆರವೇರಿಸಿದರು. ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಅಬ್ದುರ‌್ರಹ್ಮಾನ್ ಕೋಡಿಜಾಲ್ ಸಂದೇಶ ಭಾಷಣಗೈದರು. ಮಂಗಳೂರು ನಗರ ಘಟಕದ ಕಾರ್ಯದರ್ಶಿ ಸೈಫುಲ್ಲಾ, ಫಲಾಹ್ ಕಚೇರಿಯ ಮ್ಯಾನೇಜರ್ ಆದಂ ಬ್ಯಾರಿ, ಅಮೀರ್ ಕೋಡಿಜಾಲ್ ಉಪಸ್ಥಿತರಿದ್ದರು. ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಜಾಫರ್, ಗ್ರಾಪಂ ಉಪಾಧ್ಯಕ್ಷೆ ಮಾಲತಿ, ಸದಸ್ಯರಾದ ಹೈದರ್, ಇಕ್ಬಾಲ್, ಎಸ್‌ಬಿಸಿ ಅಧ್ಯಕ್ಷ ಎ.ಬಿ. ಹಸೈನಾರ್ ಉಪಸ್ಥಿತರಿದ್ದರು. ಸಂಸ್ಥೆಯ ಸಂಚಾಲಕ ಅಬ್ದುನ್ನಾಸಿರ್ ಕೆ.ಕೆ. ಸ್ವಾಗತಿಸಿದರು. ಪ್ರಾಂಶುಪಾಲ ಅಬೂಬಕರ್ ಕೆ. ವಂದಿಸಿದರು. ಶಿಕ್ಷಕ ಇಬ್ರಾಹಿಂ ಖಲೀಲ್ ಕಾರ್ಯಕ್ರಮ ನಿರೂಪಿಸಿದರು.
ಕರಂಬಾರು ಸರಕಾರಿ ಹಿ.ಪ್ರಾ.ಶಾಲೆ
ಬಜ್ಪೆ ಸಮೀಪದ ಕರಂಬಾರಿನ ದ.ಕ. ಜಿಪಂ ಹಿ.ಪ್ರಾ. ಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಸ್‌ಡಿಎಂಸಿ ಅಧ್ಯಕ್ಷ ಗುಣಪಾಲ್ ದೇವಾಡಿಗ ನೆರವೇರಿಸಿದರು. ಈ ಸಂದರ್ಭ ದಿವಂಗತ ರಾಮ ದೇವಾಡಿಗ ಸ್ಮರಣಾರ್ಥ ನೂತನ ಧ್ವಜಸ್ತಂಭವನ್ನು ಅವರ ಪತ್ನಿ ಸೀತಾ ದೇವಾಡಿಗ ಉದ್ಘಾಟಿಸಿದರು. ಅತಿಥಿಗಳಾಗಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ,ಕೋರ್ದಬ್ಬು ದೈವಸ್ಥಾನದ ಅಧ್ಯಕ್ಷ ಜಗನಾಥ್ ಸಾಲ್ಯಾನ್, ಗ್ರಾಪಂ ಮಾಜಿ ಸದಸ್ಯಲಕ್ಷ್ಮಣ್ ಬಂಗೇರ, ನಮ್ಮ ಕ್ಲಿನಿಕ್ ಮಳವೂರಿನ ವೈದ್ಯಾಧಿಕಾರಿ ಡಾ. ಸಮೀಕ್ಷಾ ಡಿ.ಪಿ , ನಮ್ಮ ಜವನೆರ್ ಕರಂಬಾರು ಅಧ್ಯಕ್ಷ ರಮೇಶ್ ಸುವರ್ಣ, ಶ್ರೀ ದೇವಿ ಸ್ಪೋರ್ಟ್ಸ್ ಗೇಮ್ಸ್ ಕ್ಲಬ್ ಅಧ್ಯಕ್ಷ ರವಿ ಶೆಟ್ಟಿ, ಓಂಕಾರ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಮನೋಜ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಆಚಾರ್ಯ, ಕೋಶಾಧಿಕಾರಿ ವಿನೋದ್ ಅರ್ಬಿ, ಖಜಾಂಚಿ ಮಿಥುನ್ ಪೂಜಾರಿ, ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಲಾವಣ್ಯ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ರಾಘವೇಂದ್ರ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಉಷಾಕಿರಣ ಸ್ವಾಗತಿಸಿದರು. ಶಿಕ್ಷಕಿ ಗೀತಾ ವಂದಿಸಿದರು.
ಕಾನ ಬದ್ರಿಯಾ ಜುಮಾ ಮಸೀದಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
ಇಲ್ಲಿನ ಕಾನ ಬದ್ರಿಯಾ ಜುಮಾ ಮಸೀದಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಶುಕ್ರವಾರ ಆಚರಿಸಲಾಯಿತು.
ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ ಶೆಡ್ಡೈ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, ವೆಲಿಯಂಗೋಡು ಉಮ್ಮರ್ ಖಾಝಿ ಅವರು ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಕೆಲವೊಂದು ಘಟನೆಗಳನ್ನು ವಿವರಿಸಿದರು.
ದುವಾ ನೆರವೇರಿಸಿ ಸ್ವಾಗತ ಭಾಷಣದಲ್ಲಿ ಮಾತನಾಡಿದ ಮಸೀದಿ ಖತೀಬರಾದ ಇಬ್ರಾಹಿಂ ಅಸ್ರಿಫ್ ಸಹದಿ ಅಲ್ ಮಲ್ಹರಿ ಅವರು, ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ ಗಣ್ಯ ವ್ಯಕ್ತಿಗಳ ಬಗ್ಗೆ ಅವರ ಜೀವನದ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸ್ವಾತಂತ್ರ್ಯ ದಿನಾಚರಣೆಯ ಮುಂಚಿತವಾಗಿ ನಡೆಸಲಾಗಿದ್ದ ವಿದ್ಯಾರ್ಥಿಗಳ ಕಲಾ, ಸಾಹಿತ್ಯ, ಚಿತ್ರ ಬರಹ, ಪ್ರಬಂಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಇದೇ ವೇಳೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಮಸೀದಿಯ ಕಾರ್ಯದರ್ಶಿ ಸಿರಾಜ್, ಕೋಶಾಧಿಕಾರಿ ಸಮದ್ ಕುಳಾಯಿ, ಕಾನ ಮದ್ರಸದ ಸದರ್ ಮುಅಲ್ಲಿಮ್ ದಾವುದುಲ್ ಹಕೀಂ ಸಖಾಫಿ, ಮುಅಝ್ಝಿನ್
ಫಾರೂಕ್ ಅಬ್ದುಲ್ಲಾ ಝೈನಿ ಮೊದಲಾದವರು ಉಪಸ್ಥಿತರಿದ್ದರು.
ಅಲ್ ಬದ್ರಿಯಾ ಮುಸ್ಲಿಂ ಜಮಾಅತ್ ಕೃಷ್ಣಾಪುರ
ಸುರತ್ಕಲ್: ಇಲ್ಲಿನ ಕೃಷ್ಣಾಪುರ 7ನೇ ಬ್ಲಾಕ್‌ನ ಅಲ್ ಬದ್ರಿಯಾ ಮುಸ್ಲಿಂ ಜಮಾಅತ್ ಕೃಷ್ಣಾಪುರ ಮತ್ತು ಇದರ ಅಧಿನಲ್ಲಿನ ಅಲ್ ಮದ್ರಸತುಲ್ ಬದ್ರಿಯಾ ವತಿಯಿಂದ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮದ್ರಸ ಸಮಿತಿ ಅಧ್ಯಕ್ಷ ಹಾಗೂ ಕೇಂದ್ರ ಬದ್ರಿಯಾ ಜುಮಾ ಮಸೀದಿಯ ಉಪಾಧ್ಯಕ್ಷರಾದ ಅಬ್ದುಲ್ ಹಕೀಮ್ ಫಾಲ್ಕಾನ್, ಖತೀಬರಾದ ಫಾರೂಕ್ ಸಖಾಫಿ ಅವರು ಧ್ವಜಾರೋಹಣ ನೆರವೇರಿಸಿದರು.
ಸ್ವಾತಂತ್ರ್ಯೋತ್ಸವ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳಿಗೆ ನಡೆಸಲಾಗಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.
ಈ ಸಂದರ್ಭ ಅಲ್ ಬದ್ರಿಯಾ ಮುಸ್ಲಿಂ ಜಮಾಅತ್ ಕೃಷ್ಣಾಪುರ ಇದರ ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಶರೀಫ್, ಮದರಸ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಸಾದಿಕ್, ಜೊತೆ ಕಾರ್ಯದರ್ಶಿ ಅಬೂಬಕರ್ ಸಿದ್ದೀಕ್, ವಿದ್ಯಾರ್ಥಿಗಳು, ಪೋಷಕರು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.
ಸದರ್ ಮುಅಲ್ಲಿಂ ಅಬ್ದುಲ್ ಖಾದರ ಮದನಿ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.







