ಅಸ್ಸಿಸಿ ಸೆಂಟ್ರಲ್ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಉಳ್ಳಾಲ: ಭಗಂಬಿಲದ ಅಸ್ಸಿಸಿ ಸೆಂಟ್ರಲ್ ಶಾಲೆಯಲ್ಲಿ 79 ನೇ ಸ್ವಾತಂತ್ರ್ಯೋತ್ಸವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಅಸ್ಸಿಸಿ ಶಾಲೆಯ ಪೋಷಕರ ಸಂಘದ ಉಪಾಧ್ಯಕ್ಷರಾದ ಮುಹಮ್ಮದ್ ಶಬೀರ್ ಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ನಮ್ಮ ದೇಶದ ಸಂಸ್ಕೃತಿ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡಬೇಕು. ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ನಾಯಕರು ಮಾಡಿದ ತ್ಯಾಗವನ್ನು ನಾವು ಸ್ಮರಿಸಬೇಕಾಗಿದೆ ಎಂದರು.
ಶಾಲೆಯ ಉಪ ಪ್ರಾಂಶುಪಾಲರಾದ ಸಿಸ್ಟರ್ ಶಾಲಿನಿ ಮಾತನಾಡಿ, ಮಕ್ಕಳು ದೇಶದ ಬಗ್ಗೆ ಪ್ರೀತಿ ಗೌರವವನ್ನು ಬೆಳೆಸುವುದರ ಮುಖಾಂತರ ದೇಶ ಸುರಕ್ಷಿತವಾಗುತ್ತದೆ ಎಂದರು.
ಶಾಲಾ ಸಂಚಾಲಕರಾದ ಸಿಸ್ಟರ್, ಬೆನೆಡಿಕ್ಟ್ ಫೆರ್ನಾಂಡಿಸ್ ಶುಭ ಹಾರೈಸಿದರು.
ನಂತರ ವಿದ್ಯಾರ್ಥಿಗಳಿಂದ ವಿವಿಧ ನೃತ್ಯ ಹಾಗೂ ದೇಶ ಭಕ್ತಿ ಗೀತೆಗಳ ಮೂಲಕ ಮನರಂಜಿಸಲಾಯಿತು.
ಸಿಸ್ಟರ್ ಸವಿತಾ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ನೆರವೇರಿಸಿದರು.
Next Story







