ಕಾರ್ಕಳ ಬಾಹುಬಲಿ ಬೆಟ್ಟಕ್ಕೆ ಎಂ.ಎನ್.ರಾಜೇಂದ್ರ ಕುಮಾರ್ ರಿಂದ ಶಾಶ್ವತ ದಾರಿದೀಪ ಅಳವಡಿಕೆ

ಕಾರ್ಕಳ : ಕಾರ್ಕಳದ ಖ್ಯಾತ ನ್ಯಾಯವಾದಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ದಿ.ಎಂ ಕೆ ವಿಜಯ ಕುಮಾರ್ ಅವರ ಸ್ಥಿರಸ್ಥಾಯಿ ನೆನಪಿಗಾಗಿ ಕಾರ್ಕಳದ ಬಾಹುಬಲಿ ಬೆಟ್ಟದ ರಸ್ತೆಗೆ ಹಾಗೂ ಬಾಹುಬಲಿ ಬೆಟ್ಟದ ಮೇಲ್ಬಾಗದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ, ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರ ವತಿಯಿಂದ ಶಾಶ್ವತ ದಾರಿದೀಪ ಅಳವಡಿಸಲಾಯಿತು.
ಶನಿವಾರ ರಾತ್ರಿ ಕಾರ್ಕಳ ಜೈನಮಠದ ಪರಮ ಸ್ವಸ್ತಿಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ದಾರಿ ದೀಪವನ್ನು ಬೆಳಗಿಸುವ ಮೂಲಕ ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ, ಡಾ.ಎಂ.ಎನ್.ರಾಜೇಂದ್ರ ಕುಮಾರ್, ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮುನಿಯಲು, ಜೈನ ಸಮುದಾಯದ ಪ್ರಮುಖರಾದ ಸುನೀಲ್ ಕುಮಾರ್ ಬಜಗೋಳಿ, ಮಹಾವೀರ್ ಹೆಗ್ಡೆ ಅಂಡಾರು, ಮೋಹನ್ ಪಡಿವಾಳ್, ಶ್ರೀಕಾಂತ್ ಜೈನ್ ಉಪಸ್ಥಿತರಿದ್ದರು.
Next Story





