ಒಡಿಯೂರು ಶ್ರೀ ಜನ್ಮದಿನೋತ್ಸವ ಪ್ರಯುಕ್ತ ಅಂತರ್ ಕಾಲೇಜು ಕಿರುನಾಟಕ ಸ್ಪರ್ಧೆ

ವಿಟ್ಲ: ಕಲೆ ಮತ್ತು ಕಲಾವಿದ ಮಾನ್ಯತೆ ಪಡೆಯಬೇಕಾದರೆ ಸೂಕ್ಷ್ಮತೆಯನ್ನು ಗುರುತಿಸುವ ಕೌಶಲ್ಯ ಕಲಾವಿದನಿಗೆ ಇರಬೇಕು. ಜೀವನ ನಾಟಕದ ಸೂತ್ರಧಾರ ಭಗವಂತ ರೂಪಕಲೆಗಳಲ್ಲಿ ರಂಗಭೂಮಿಯೂ ಮುಖ್ಯವಾದುದು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ವತಿಯಿಂದ ಪೂಜ್ಯ ಶ್ರೀಗಳವರ ಜನ್ಮದಿನೋತ್ಸವ ಗ್ರಾಮೋತ್ಸವ 2025 ಸೇವಾ ಸಂಭ್ರಮ ಗುರುವಂದನ ಅಂತರ್ ಕಾಲೇಜು ವಿದ್ಯಾರ್ಥಿಗಳ ಕಿರು ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ವರ್ತಮಾನದ ತಲ್ಲಣಗಳು ಎಂಬ ಆಶಯದೊಂದಿಗೆ ವರ್ತಮಾನದಲ್ಲಿ ನಡೆದ ಕಿರುನಾಟಕ ಸ್ಪರ್ಧೆ ಭವಿಷ್ಯದ ಧನಾತ್ಮಕ ಪರಿವರ್ತನೆಗೆ ಸಹಕಾರಿಯಾಗಲಿ ಎಂದು ಒಡಿಯೂರು ಶ್ರೀಗಳು ಹೇಳಿದರು.
ಜೀವನವೆಂಬ ನಾಟಕದ ಸೂತ್ರಧಾರ ಭಗವಂತ. ಹಾಗಾಗಿ ಅವನು ನೀಡಿದ ಪಾತ್ರವನ್ನು ನೈಪುಣ್ಯದಿಂದ ನಿರ್ವಹಿಸಿ ಆಧ್ಯಾತ್ಮಿಕ ನೆಲೆಗಟ್ಟು ಕಂಡುಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಸ್ವಾಮೀಜಿ ನುಡಿದರು.
ಸಾಧ್ವಿ ಶ್ರೀ ಮಾತಾನಂದಮಯಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.
ಸ್ವಾಗತ ಸಮಿತಿಯ ಅಧ್ಯಕ್ಷ ಸಹಕಾರ ರತ್ನ ಎ. ಸುರೇಶ್ ರೈ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಲಿಂಗಪ್ಪ ಗೌಡ ಪನೆಯಡ್ಕ, ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿ ಗುತ್ತು,, ಪ್ರಧಾನ ಕಾರ್ಯ ದರ್ಶಿ ಯಶವಂತ ವಿಟ್ಲ, ತೀರ್ಪುಗಾರರಾದ ರಾಘವ ಸೂರಿ, ಶಶಿರಾಜ್ ರಾವ್ ಆರ್. ಕಾವೂರು, ಮಂಜುಳಾ ಜನಾರ್ದನ ಕುಳಾಯಿ, ಸಂಘಟನಾ ಕಾರ್ಯದರ್ಶಿ ನವನೀತ ಶೆಟ್ಟಿ ಕದ್ರಿ ಸ್ವಾಗತಿಸಿದರು. ಇನ್ನೋರ್ವ ಸಂಘಟನಾ ಕಾರ್ಯದರ್ಶಿ ಮಾತೇಶ ಭಂಡಾರಿ ವಂದಿಸಿದರು. ವಾರುಣೀ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.







