ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ರಯ್ಯಾನ್ ಗೆ 2 ಚಿನ್ನದ ಪದಕ

International Karate Championship: Rayyan wins 2 gold medals
ಉಜಿರೆ: ಶಿವಮೊಗ್ಗದ ನೆಹರು ಇನ್ ಡೋರ್ ಸ್ಪೇಡಿಯಂನಲ್ಲಿ ಆ.10ರಂದು ನಡೆದ 6ನೇ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್- 2025ರಲ್ಲಿ ಉಜಿರೆಯ ಅನುಗ್ರಹ ಅಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮುಹಮ್ಮದ್ ರಯ್ಯಾನ್ ಪ್ರಥಮ ಸ್ಥಾನದೊಂದಿಗೆ ಎರಡು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ರಯ್ಯಾನ್ ಕರಾಟೆಯ ಕಟಾ ಮತ್ತು ಫೈಟಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ. ಸತತ 2ನೇ ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಪ್ರಶಸ್ತಿ ಗಳಿಸಿರುವ ಹೆಗ್ಗಳಿಕೆ ಇವರದ್ದಾಗಿದೆ.
ಇವರು ಉಜಿರೆಯ ಆರ್.ಆರ್. ಸಿಸಿಟಿವಿ ಮಾಲಕ ಬಿ.ಎಚ್.ಇಬ್ರಾಹೀಂ ಮತ್ತು ನೂರ್ ಜಹಾನ್ ದಂಪತಿ ಪುತ್ರ.
2024ರ ಸೆಪ್ಟಂಬರ್ ನಲ್ಲಿ ಮಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಕರಾಟೆಯಲ್ಲೂ ರಯ್ಯಾನ್ ಪ್ರಥಮ ಸ್ಥಾನ ಮತ್ತು 2 ಚಿನ್ನದ ಪದಕಗಳನ್ನು ಜಯಿಸಿದ್ದರು. ಅವರಿಗೆ ಸಿಹಾನ್ ಅಬ್ದುಲ್ ರಹ್ಮಾನ್ ತರಬೇತಿ ನೀಡಿದ್ದಾರೆ.
Next Story





