ಡಿ.17ರಂದು ಬೆಳ್ತಂಗಡಿ ತಾಲೂಕು ಮಟ್ಟದ ದಫ್ ಸ್ಪರ್ಧೆಗೆ ಆಹ್ವಾನ

ಬೆಳ್ತಂಗಡಿ, ಡಿ.15: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಡಿ.17ರಂದು ಸಂಜೆ 4ಕ್ಕೆ ಬೆಳ್ತಂಗಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ದಫ್ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಬಯಸುವ ತಂಡಗಳು ಡಿ.16ರ ಸಂಜೆ 6 ಗಂಟೆಯೊಳಗೆ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಹೆಸರು ನೋಂದಾಯಿಸಲು ಮೊ.ಸಂ: 9845499527ನ್ನು ಸಂಪರ್ಕಿಸಬಹುದು ಎಂದು ಅಕಾಡಮಿಯ ಸದಸ್ಯ ಹಾಗೂ ದಫ್ ಸ್ಪರ್ಧೆಯ ಸದಸ್ಯ ಸಂಚಾಲಕ ಯು.ಎಚ್. ಖಾಲಿದ್ ಉಜಿರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





