ಜು.19: ಮುಹರ್ರಂ ತಿಂಗಳಾರಂಭ

ಮಂಗಳೂರು, ಜು.18: ಮಂಗಳವಾರ ಅಸ್ತಮಿಸಿದ ಬುಧವಾರ ರಾತ್ರಿ ಮುಹರ್ರಂ ತಿಂಗಳ ಪ್ರಥಮ ಚಂದ್ರದರ್ಶನವಾಗಿರುತ್ತದೆ. ಹಾಗಾಗಿ ಜು.19ರ ಬುಧವಾರ ಮುಹರ್ರಂ ತಿಂಗಳು ಆರಂಭವಾಗಿರುತ್ತದೆ ಎಂದು ದ.ಕ.ಜಿಲ್ಲಾ ಖಾಝಿ ಶೈಖುನಾ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ಮತ್ತು ಸಂಯುಕ್ತ ಉಳ್ಳಾಲ ಖಾಝಿ ಕೂರತ್ ತಂಙಳ್ ಹಾಗೂ ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಖಾಝಿ ಶೈಖುನಾ ಮಾಣಿ ಉಸ್ತಾದ್ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಹರ್ರಂ 9ರಂದು ತಾಸೂಆ ಮತ್ತು 10ರಂದು ಆಶೂರಾ (ಜು.27 ಮತ್ತು 28) ಆಗಲಿದ್ದು, ಅಂದು ಉಪವಾಸ ಕೈಗೊಳ್ಳಲು ಸುನ್ನತ್ ಆಗಿರುತ್ತದೆ ಪ್ರಕಟನೆ ತಿಳಿಸಿದೆ.
Next Story