ಜಮಿಯ್ಯತುಲ್ ಫಲಾಹ್ ಮೂಡಬಿದ್ರೆ ಘಟಕದ ಕಚೇರಿ ಉದ್ಘಾಟನೆ

ಮೂಡಬಿದ್ರೆ : ಜಮಿಯ್ಯತುಲ್ ಫಲಾಹ್‌ನ ಮೂಡಬಿದ್ರೆ ಘಟಕದ ಹೊಸ ಕಚೇರಿಯನ್ನು ಶನಿವಾರ ಸಂಸ್ಥೆಯ ಸ್ಥಾಪಕ ಇಕ್ಬಾಲ್ ಯೂಸುಫ್ ಅವರು ಉದ್ಘಾಟಿಸಿದರು.
ಜಮಿಯ್ಯತುಲ್ ಫಲಾಹ್ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಕಾರ್ಯದರ್ಶಿ ಶೈಖ್ ಅಬ್ದುಲ್ ಗಫೂರ್, ಮೂಡಬಿದ್ರೆ ಘಟಕದ ಅಧ್ಯಕ್ಷ ಅಬ್ದುಲ್ ರೌಫ್, ಮೂಡಬಿದ್ರೆ ಘಟಕದ ಖಜಾಂಚಿ ಸಲೀಂ ಹಂಡೇಲ್ ಮತ್ತು ಕಾರ್ಕಳ ಘಟಕದ ಅಧ್ಯಕ್ಷ ಮುಹಮ್ಮದ್ ಆಶ್ಫಾಕ್, ಯೋಜನಾ ಮುಖ್ಯಸ್ಥ ಶೈಖ್ ನೂರ್‌ದ್ದೀನ್ ಅವರು ಭಾಗವಹಿಸಿದ್ದರು.
ಜಮಿಯ್ಯತುಲ್ ಫಲಾಹ್ ಮಂಗಳೂರು ಮತ್ತು ಮೂಡಬಿದ್ರೆ ಘಟಕದ ಹಿರಿಯ ಸದಸ್ಯರು ಕೂಡ ಹಾಜರಿದ್ದರು.
Next Story





