ಜ.14: ಶ್ರೀ ಕ್ಷೇತ್ರ ಕದ್ರಿಯಲ್ಲಿ ವರ್ಷಾವಧಿ ಜಾತ್ರೆ

ಮಂಗಳೂರು , ಜ.13: ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವರ ವರ್ಷಾವಧಿ ಜಾತ್ರೆ ಜ.14ರಂದು ಆರಂಭವಾಗಲಿದೆ.
ಮುಂಜಾನೆ ತೀರ್ಥ ಸ್ನಾನ ಪ್ರಾರಂಭಗೊಳ್ಳಲಿದ್ದು, 8:30ಕ್ಕೆ ಕದ್ರಿ ಶ್ರೀಮಠಾಧಿಪತಿಯವರ ತೀರ್ಥ ಸ್ನಾನ ನಡೆಯು ವುದು. ಸಂಜೆ 6ಕ್ಕೆ ಏಳು ಪಟ್ಟಣ ಮೊಗವೀರ ಮಹಾಸಭಾ ದೇವರಿಂದ ‘ಧ್ವಜಸ್ತಂಭ ಆರೋಹಣ ’ವಾಗುವುದು, ಬಳಿಕ ಶ್ರೀ ಮಲರಾಯ ದೈವದ ಭಂಡಾರ ಆಗಮನ, ರಾತ್ರಿ ಕದ್ರಿ ಹತ್ತು ಸಮಸ್ತರಿಂದ ಗರುಡಾರೋಹಣದ ಬಳಿಕ ಉತ್ಸವ ಬಲಿ,ದೀಪದ ಬಲಿ, ಸಣ್ಣ ರಥೋತ್ಸವ ಜರಗಲಿದೆ.
ಪ್ರತಿನಿತ್ಯ ದೇವರ ಉತ್ಸವ ಬಲಿ ನಡೆಯಲಿದ್ದು, ಶುಕ್ರವಾರ ಬಿಕರ್ನಕಟ್ಟೆ ಸವಾರಿ, ಶನಿವಾರ ಮಲ್ಲಿಕಟ್ಟೆ ಸವಾರಿ, ಆದಿತ್ಯವಾರ ಮುಂಡಾಣಕಟ್ಟೆ ಸವಾರಿ, ಸೋಮವಾರ ಕೊಂಚಾಡಿ ಸವಾರಿ ನಡೆಯಲಿದ್ದು, ಜ20ರಂದು ಏಳನೇ ದೀಪೋತ್ಸವ ಹಾಗೂ ಅಂದು ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಲಿದೆ. ಜ.21 ಸಂಜೆ 6ಕ್ಕೆ ಶ್ರೀ ಮನ್ಮಹಾರಥೋತ್ಸವ - ಬೆಳ್ಳಿ ರಥೋತ್ಸವ , ಜ.22 ಬೆಳಗ್ಗೆ ಮಂಜುನಾಥ ದೇವರ ಕವಾಟೋದ್ಘಾಟನೆ, ರಾತ್ರಿ ಚಂದ್ರಮಂಡಲ ಉತ್ಸವ, ಅವಭೃತ ಸ್ನಾನ ಹಾಗೂ ಧ್ವಜಾವರೋಹಣ ಕೊಳ್ಳುವುದು. ಜ.24 ರಾತ್ರಿ ಶ್ರೀ ಮಲರಾಯ, ಶ್ರೀ ಜಾರಂದಾಯ, ಶ್ರೀ ವೈದ್ಯನಾಥ ಮತ್ತು ಶ್ರೀ ಪಿಲಿಚಾಮುಂಡಿ ದೈವಗಳ ನೇಮದೊಂದಿಗೆ ವಾರ್ಷಿಕ ಜಾತ್ರೆ ಸಮಾಪನಗೊಳ್ಳುವುದು ಎಂದು ದೇವಳದ ಪ್ರಕಟನೆ ತಿಳಿಸಿದೆ





