ಜ.15 - 25 ಉಚ್ಚಿಲ ಉರೂಸ್

ಉಳ್ಳಾಲ: 407 ಜುಮಾ ಮಸೀದಿ ಸೋಮೇಶ್ವರ ಉಚ್ಚಿಲ ಇಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಅಸಯ್ಯಿದ್ ಶರೀಫುಲ್ ಅರಬಿ ವಲಿಯುಲ್ಲಾಹಿ (ಖ.ಸಿ.) ಹೆಸರಿನಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಿ ಕೊಂಡು ಬರುವ ಉರೂಸ್ ಕಾರ್ಯಕ್ರಮ ಜ.15 ರಿಂದ ಜ.25ರ ವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿ ಕಾರ್ಯದರ್ಶಿ ಸಲಾಮ್ ಉಚ್ಚಿಲ ಹೇಳಿದರು.
ಅವರು ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.15ರಂದು ಗುರುವಾರ ಅಸರ್ ನಮಾಝ್ ಬಳಿಕ ಸ್ಥಳೀಯ ಮುದರ್ರಿಸ್ ಅಲ್ ಹಾಜ್ ಎಂ.ಪಿ.ಇಬ್ರಾಹೀಮ್ ಫೈಝಿ ಉದ್ಯಾವರ ರವರ ನೇತೃತ್ವ ದಲ್ಲಿ ಮಖಾಂ ಝಿಯಾರತ್ ನಡೆಯಲಿದೆ. ಸಂಜೆ ಏಳು ಗಂಟೆಗೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಸಯ್ಯಿದುಲ್ ಉಲಮಾ ಅಸಯ್ಯಿದ್ ಜಿಫ್ರಿ ಮುತ್ತುಕೋಯ ತಂಙಳ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಸಯ್ಯಿದ್ ಅತ್ತಾವುಲ್ಲ ತಂಙಳ್ ಉದ್ಯಾವರ ದುಆ ನೆರವೇರಿಸಲಿದ್ದಾರೆ.ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ ಅಧ್ಯಕ್ಷತೆ ವಹಿಸಲಿದ್ದಾರೆ. ಅನ್ವರ್ ಅಲಿ ಮದನಿ ಮಲಪ್ಪುರಂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಸ್ಪೀಕರ್ ಯುಟಿ ಖಾದರ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜ.16ರಿಂದ ಜ.23 ವರೆಗೆ ಪ್ರತಿದಿನ ಸಂಜೆ ಏಳು ಗಂಟೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದ್ದು ಹಲವು ಧಾರ್ಮಿಕ ಪಂಡಿತರು ಆಗಮಿಸಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಜ.21 ಬುಧವಾರ ಬೆಳಿಗ್ಗೆ 9 ಗಂಟೆಗೆ ಉಲಮಾ ಉಮರಾ ಕಾನ್ಫರೆನ್ಸ್ ನಡೆಯಲಿದ್ದು ಅನಸ್ ಅಮಾನಿ ಪುಷ್ಪಗಿರಿ ಮತ್ತು ಶಾಜಿಹು ಶಮೀಸ್ ಅಲ್ ಅಝ್ ಅರಿ ಮಲಪ್ಪುರಂ ತರಬೇತಿ ನೀಡಲಿದ್ದಾರೆ.ಸಯ್ಯಿದ್ ಅಶ್ರಫ್ ತಂಙಳ್ ಆದೂರು ಉದ್ಘಾಟಿಸಲಿದ್ದು, ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ದುಆ ನೆರವೇರಿಸಲಿದ್ದಾರೆ ಎಂದರು.
ಜ.24 ರಂದು ಸಂಜೆ ಏಳು ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು ಸುಲ್ತಾನುಲ್ ಉಲಮಾ ಎ.ಪಿ. ಅಬೂಬಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದು, ಅಬ್ದುಲ್ ಹಕೀಮ್ ಅಝ್ ಅರಿ, ಹಂಝ ಮಿಸ್ಬಾಹಿ ಓಟಪಡವು ಸಮಾರೋಪ ಉಪನ್ಯಾಸ ನೀಡಲಿದ್ದಾರೆ. ಸ್ಪೀಕರ್ ಯುಟಿ ಖಾದರ್, ವಸತಿ ಸಚಿವ ಝಮೀರ್ ಅಹ್ಮದ್, ಮಂಜೇಶ್ವರ ಶಾಸಕ ಅಶ್ರಫ್ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಜ.25 ರಂದು ಬೆಳಿಗ್ಗೆ 9 ಗಂಟೆಗೆ ಸಯ್ಯಿದ್ ಆಟಕೋಯ ತಂಙಳ್ ಕುಂಬೋಳ್ ರವರ ನೇತೃತ್ವದಲ್ಲಿ ಮೌಲಿದ್ ಪಾರಾಯಣ, ಬೆಳಿಗ್ಗೆ 10 ಗಂಟೆ ಯಿಂದ ಸಂಜೆ ನಾಲ್ಕು ಗಂಟೆ ವರೆಗೆ ಅನ್ನದಾನ ವಿತರಣೆ ನಡೆಯಲಿದೆ ಎಂದರು.
ಸುದ್ದಿ ಗೋಷ್ಠಿ ಯಲ್ಲಿ ಉಚ್ಚಿಲ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಜಿ ಕೊಪ್ಪಳ, ಉಪಾಧ್ಯಕ್ಷ ಅಬ್ಬಾಸ್ ಹಾಜಿ ಪೆರಿ ಬೈಲ್, ಕೋಶಾಧಿಕಾರಿ ಹಸೈನಾರ್ ಹಾಜಿ, ಇಸಾಕ್ ಅಲಿ, ಸದಸ್ಯ ಅಹ್ಮದ್ ಪೆರಿ ಬೈಲ್ ಉಪಸ್ಥಿತರಿದ್ದರು.







