ಜ.17: ಎಸ್‌ಐಆರ್ ಬಗ್ಗೆ ಮಾಹಿತಿ ಕಾರ್ಯಾಗಾರ

ಮಂಗಳೂರು, ಜ.16: ಸಮಾನ ಮನಸ್ಕ ಸಂಘಟನೆಗಳು ಎಸ್‌ಐಆರ್ ಬಗ್ಗೆ ಮಾಹಿತಿ ನೀಡುವ ಸಲುವಾಗಿ ನಗರದ ಬಲ್ಮಠದ ಸಹೋದಯ ಹಾಲ್‌ನಲ್ಲಿ ಜ.17ರಂದು ಬೆಳಗ್ಗೆ 10ಕ್ಕೆ ಕಾರ್ಯಾಗಾರ ಹಮ್ಮಿಕೊಂಡಿದೆ.
ಮತದಾನ ದೇಶದ ಪ್ರತಿಯೊಬ್ಬ ನಾಗರಿಕನ ಹಕ್ಕಾಗಿದೆ. ಮತದಾನದ ಹಕ್ಕನ್ನು ದಾಖಲೆ ಕೊರತೆ ಮತ್ತಿತರ ಕಾರಣ ಗಳಿಗಾಗಿ ವ್ಯವಸ್ಥಿತವಾಗಿ ಕಸಿಯುತ್ತಿರುವುದು ಪ್ರಜಾಪ್ರಭುತ್ವ ಮತ್ತು ಸಂವಿಧಾನ ವಿರೋಧಿ ಕೃತ್ಯವಾಗಿದೆ. ಇದರಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಆದಿವಾಸಿಗಳ ಸಹಿತ ಶೋಷಿತ ಸಮುದಾಯಗಳು ಸಂವಿಧಾನಬದ್ಧ ಹಕ್ಕನ್ನು ಕಳೆದುಕೊಳ್ಳಲಿವೆ. ಕೇಂದ್ರ ಸರಕಾರದ ಈ ಅಪಾಯಕಾರಿ ನಡೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ಚಿಂತಕ ಶಿವಸುಂದರ್ ಹಾಗೂ ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಕ್ಲಿಪ್ಲನ್ ಡಿ. ರೊಝಾರಿಯೋ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





