ಜ.2-4: ವಾರ್ಷಿಕ ಜಲಾಲಿಯ್ಯ , ಬುರ್ದಾ ಮಜ್ಲಿಸ್; ಅಧ್ಯಾತ್ಮಿಕ ಸಂಗಮ

ಮಂಗಳೂರು, ಡಿ.29: ಉಳ್ಳಾಲದ ಮೇಲಂಗಡಿಯ ಕೆಎಂಜೆ, ಎಸ್ವೈಎಸ್, ಎಸ್ಎಸ್ಎಫ್ ವತಿಯಿಂದ 9ನೇ ವಾರ್ಷಿಕ ಜಲಾಲಿಯ್ಯ, ಬುರ್ದಾ ಮಜ್ಲಿಸ್ ಮತ್ತು ಆಧ್ಮಾತ್ಮಿಕ ಸಂಗಮ ಕಾರ್ಯಕ್ರಮ ಜ.2ರಿಂದ 4ರ ತನಕ ಮೇಲಂಗಡಿಯ ತಾಜುಲ್ ಉಲಮಾ ವೇದಿಕೆ ಖುರ್ರತುಸ್ಸಾದಾತ್ ಸಭಾಂಗಣದಲ್ಲಿ ನಡೆಯಲಿದೆ.
ಜ.2ರಂದು ಮಗ್ರಿಬ್ ನಮಾಝ್ನ ಬಳಿಕ ಅಶ್ರಫ್ ಮುಸ್ಲಿಯಾರ್ ಪೆರುಮುಗಂ ನೇತೃತ್ವದಲ್ಲಿ ಬೃಹತ್ ಬುರ್ದಾ ಮಜ್ಲಿಸ್ ನಡೆಯಲಿದೆ.
ಜ.3ರಂದು ಮಗ್ರಿಬ್ ನಮಾಜ್ನ ಬಳಿಕ ಅಸ್ಸಯ್ಯಿದ್ ಹಸ್ಸಬುಲ್ಲಾಹ್ ಬಾಫಖಿ ತಂಙಳ್ ಕೊಲ್ಲಂ ಇವರಿಂದ ಮತಪ್ರಭಾಷಣವನ್ನು ಆಯೋಜಿಸಲಾಗಿದೆ.
ಜ.4ರಂದು ಮಗ್ರಿಬ್ ನಮಾಝ್ನ ಬಳಿಕ ಮಾದರಿ ಮದುವೆ ಶತದಿನ ಅಭಿಯಾನ ಕಾರ್ಯಕ್ರಮದಲ್ಲಿ ಕೆ.ಎಂ. ಅಬೂಬಕರ್ ಸಿದ್ದೀಕ್ ಉಸ್ತಾದ್ ಮೋಂಟುಗೋಳಿ ವಿಷಯ ಮಂಡನೆ ಮಾಡಲಿರುವರು. ಬಳಿಕ ಸಯ್ಯದ್ ಮುಷ್ತಾಕುರ್ರಹ್ಮಾನ್ ತಂಙಳ್ ಚಟ್ಟಕ್ಕಲ್ ನೇತೃತ್ವದಲ್ಲಿ ಬೃಹತ್ ಜಲಾಲಿಯ್ಯ ಮಜ್ಲಿಸ್ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಕರ್ನಾಟಕ ವಿಧಾನ ಸಭೆಯ ಸ್ಪೀಕರ್ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು ಎಂದು ಪ್ರಕಟನೆ ತಿಳಿಸಿದೆ.





