ಜ.4-11: ಕುಂಡೂರು ಉರೂಸ್

ಉಳ್ಳಾಲ: ಕೇಂದ್ರ ಜುಮಾ ಮಸೀದಿ ಕುಂಡೂರು - ಪರಿಯಕ್ಕಳದಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ಅಸ್ಸಯ್ಯಿದ್ ಮುಹಮ್ಮದ್ ರಿಫಾಯಿ ಅಲ್ ಬುಖಾರಿ ರವರ ಹೆಸರಿನಲ್ಲಿ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ಜ.4 ರಿಂದ ಜ.11 ರ ವರೆಗೆ ನಡೆಯಲಿದೆ ಎಂದು ಮಸೀದಿ ಅಧ್ಯಕ್ಷ ಹಾಜಿ ಅಬೂಬಕ್ಕರ್ ಸಿದ್ದೀಕ್ ಸ್ವಾಗತ್ ಹೇಳಿದರು.
ಅವರು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜನವರಿ 4 ರಂದು ಭಾನುವಾರ ರಾತ್ರಿ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಉರೂಸ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಸಮಸ್ತ ಮುಶಾವರ ಕಾರ್ಯದರ್ಶಿ ಶೈಖುನಾ ಉಮರ್ ಫೈಝಿ ಮುಕ್ಕಂ ದುಆ ಆಶೀರ್ವಚನ ನೀಡಲಿದ್ದಾರೆ. ಅಬೂಬಕರ್ ಸಿದ್ದೀಕ್ ಅಝ್ಹರಿ ಪಯ್ಯನ್ನೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ.
ಜ.5 ರಿಂದ ಜ 10 ವರೆಗೆ ಧಾರ್ಮಿಕ ಉಪನ್ಯಾಸ ನಡೆಯಲಿದ್ದು, ಅಸಯ್ಯಿದ್ ಅತ್ತಾವುಲ್ಲ ತಂಙಳ್, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇರ್ಶಾದ್ ದಾರಿಮಿ ಮಿತ್ತಬೈಲ್, ಅಶ್ಫಾಕ್ ಫೈಝಿ ನಂದಾವರ, ಸಯ್ಯಿದ್ ಅಮೀರ್ ತಂಙಳ್ ಕಿನ್ಯ, ಸ್ವಾಲೀಹ್ ಫೈಝಿ ಬತ್ತೇರಿ , ಅಶ್ರಫ್ ರಹ್ಮನಿ ಚೌಕಿ, ಅಸಯ್ಯಿದ್ ಶರಪುದ್ದೀನ್ ತಂಙಳ್ ಸಹಿತ ಹಲವು ಧಾರ್ಮಿಕ ಪಂಡಿತರು, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಜ.8 ರಂದು ಗುರುವಾರ ರಾತ್ರಿ ಅಬ್ದುಲ್ ಲತೀಫ್ ಸಖಾಫಿ ಕಾಂತಪುರಂ ರವರ ನೇತೃತ್ವದಲ್ಲಿ ಮದನೀಯಂ ಮಜ್ಲಿಸ್, ಜ.9 ರಂದು ಶುಕ್ರವಾರ ರಾತ್ರಿ ವಲಿಯುದ್ದೀನ್ ಫೈಝಿ ಅವರ ನೇತೃತ್ವದಲ್ಲಿ ನೂರೇ ಅಜ್ಮೀರ್ ಕಾರ್ಯಕ್ರಮ ನಡೆಯಲಿದೆ.
ಜ.10 ಶನಿವಾರ ರಾತ್ರಿ 8.30 ಗಂಟೆಗೆ ಸೌಹಾರ್ದ ಸಭೆ ನಡೆಯಲಿದ್ದು, ಸ್ಪೀಕರ್ ಯುಟಿ ಖಾದರ್, ಡಿ.ಕೆ.ಶಿವಕುಮಾರ್, ಝಮೀರ್ ಅಹ್ಮದ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂತೋಷ್ ಲಾಡ್, ಹೆಚ್ . ಕೆ. ಪಟೇಲ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಾಜಿ ಸಚಿವ ರಮಾನಾಥ್ ರೈಸಹಿತ ಹಲವು ರಾಜಕೀಯ, ಧಾರ್ಮಿಕ, ಸಾಮಾಜಿಕ ಮುಖಂಡರು ಭಾಗವಹಿಸಲಿದ್ದು , ಮಸೀದಿ ರಸ್ತೆ ಉದ್ಘಾಟನೆ, ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ಜ.11 ಭಾನುವಾರ ಉರೂಸ್ ಸಮಾರೋಪ ನಡೇಯಲಿದ್ದು, ಸೆಯ್ಯದ್ ಅಲಿ ತಂಙಳ್ ಕುಂಬೋಳ್, ಅಶ್ರಫ್ ಫೈಝಿ ಅಲ್ ಮುರ್ಶಿದಿ ಸಮಾರೋಪ ಉಪನ್ಯಾಸ ನೀಡಲಿದ್ದಾರೆ. ಇಶಾ ನಮಾಝ್ ಬಳಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿ ಗೋಷ್ಠಿ ಯಲ್ಲಿ ಕುಂಡೂರು ಕೇಂದ್ರ ಜುಮಾ ಮಸ್ಜಿದ್ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮಜಲು ತೋಟ, ಖತೀಬ್ ಅಶ್ರಫ್ ಫೈಝಿ ಅರ್ಕಾನ, ರಫೀಕ್ ಎಸ್.ಎಮ್, ನುಸ್ರತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ, ಕೋಶಾಧಿಕಾರಿ ಸಲೀಮ್ ಅಲಿ, ಲೆಕ್ಕ ಪರಿಶೋಧಕ ಅಬ್ದುಲ್ ರಶೀದ್ ಕುಂಡೂರು ಉಪಸ್ಥಿತರಿದ್ದರು







