ಮಾದಕ ದ್ರವ್ಯ ಸೇವನೆ ವಿರುದ್ಧ ಜಾಥಾ ಜನಜಾಗೃತಿ ಸಮಾವೇಶ

ಉಳ್ಳಾಲ: ಡ್ರಗ್ ಮುಕ್ತ ರಾಗಿ ನಾವು ಇಂತಹ ಕಾರ್ಯಕ್ರಮ ಮಾಡಬೇಕಾಗಿದೆ. ನಾವು ಒಂದು ಸಮುದಾಯವಾಗಿ ಇದನ್ನು ಹೇಗೆ ನಿರ್ಮೂಲನೆ ಮಾಡಬಹುದು ಎಂಬ ಬಗ್ಗೆ ಒಂದು ಅಭಿಪ್ರಾಯ ಕ್ಕೆ ಬರಬೇಕಾದ ಅಗತ್ಯ ಇದೆ. ಇದೇ ರೀತಿ ಕಾರ್ಯಕ್ರಮ ಪ್ರತಿ ಪ್ರದೇಶದಲ್ಲಿ ಮಾಡಿಕೊಂಡು ಬರಬೇಕಾಗಿದೆ ಎಂದು ಮಂಗಳೂರು ವಿಶ್ವವಿದ್ಯಾಲಯ ಪ್ರೊ. ಎ.ಎಂ.ಖಾನ್ ಹೇಳಿದರು
ಅವರು ಉಳ್ಳಾಲ ಪೇಟೆ ನಾಗರಿಕ ಸಮಿತಿ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲ ಪೇಟೆ ನಗರಸಭಾ ಸಭಾಂಗಣದಲ್ಲಿ ಜರುಗಿದ ಮಾದಕ ದ್ರವ್ಯ ಸೇವನೆ ವಿರುದ್ಧ ಜಾಥಾ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಮಾದಕ ವ್ಯಸನದಿಂದ ಸಮಾಜ ಹಾಳಾಗುತ್ತದೆ. ಉಳ್ಳಾಲ ಮಾದಕ ದ್ರವ್ಯ ಸೇವನೆ ಮುಕ್ತ ಪ್ರದೇಶ ಆಗಬೇಕು ಎಂದು ಕರೆ ನೀಡಿದರು.
ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ,ಮಾದಕ ದ್ರವ್ಯ ಎಲ್ಲೆಡೆ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಕೂಡ ಇದಕ್ಕೆ ಬಲಿಯಾಗುತ್ತಿದ್ದಾರೆ. ಉಳ್ಳಾಲ ಮಾದಕ ದ್ರವ್ಯ ಮುಕ್ತ ನಗರ ಆಗಬೇಕು ಎಂದು ಕರೆ ನೀಡಿದರು
ಕಿಶೋರ್ ಅತ್ತಾವರ ಮಾತನಾಡಿದರು. ರಹ್ಮಾನಿಯ ಜುಮ್ಮಾ ಮಸೀದಿ ಖತೀಬ್ ಇಬ್ರಾಹಿಂ ಮದನಿ ದುಆ ನೆರವೇರಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಪ್ರಯುಕ್ತ ಉಳ್ಳಾಲ ಪೇಟೆ ರಹ್ಮಾನಿಯ ಜುಮ್ಮಾ ಮಸೀದಿ ವಠಾರದಿಂದ ನಗರಸಭಾ ಸಭಾಂಗಣದವರೆಗೆ ಜನಜಾಗೃತಿ ಜಾಥಾ ನಡೆಯಿತು.
ಕಾರ್ಯಕ್ರಮದಲ್ಲಿಹಾಜಿ ಇಬ್ರಾಹಿಂ ಮದನಿ , ದರ್ಗಾ ಮಾಜಿ ಅಧ್ಯಕ್ಷ ರಶೀದ್ ಹಾಜಿ, ನಗರ ಸಭೆ ಮಾಜಿ ಅಧ್ಯಕ್ಷ ಹುಸೈನ್ ಕುಂಞಿ ಮೊನು, ಮೊಯ್ದಿನ್ ಉಳ್ಳಾಲ, ಕೌನ್ಸಿಲ ರ್ ಮೊಹಮ್ಮದ್ ಮುಕಚೇರಿ ಮತ್ತಿತರರು ಉಪಸ್ಥಿತರಿದ್ದರು.
ಅಬ್ದುಲ್ ನಾಸಿರ್ ಕಿರಾಅತ್ ಪಠಿಸಿದರು. ರಹ್ಮಾನಿಯ ಜುಮ್ಮಾ ಮಸೀದಿ ಪ್ರಧಾನ ಕಾರ್ಯದರ್ಶಿಮುಸ್ತಫಾ ಸ್ವಾಗತಿಸಿದರು.







