ಜಪ್ಪಿನಮೊಗರು: ಅಸಮರ್ಪಕ ಚರಂಡಿ ಕಾಮಗಾರಿ; ಮಳೆ ನೀರು ಅಂಗಡಿಗೆ ನುಗ್ಗಿ ಹಾನಿ

ಮಂಗಳೂರು, ಮೇ 23: ಜೆಪ್ಪಿನಮೊಗರಿನಲ್ಲಿ ಪ್ರಶಾಂತ್ ಡಿಸೋಜಾಎಂಬವರು ದಿನಸಿ ಅಂಗಡಿ ನಡೆಸುತ್ತಿದ್ದು ಮಹಾನಗರ ಪಾಲಿಕೆ ವತಿಯಿಂದ ಚರಂಡಿ ಕಾಮಗಾರಿ ನಡೆಸುವ ಸಂದರ್ಭದಲ್ಲಿಮಳೆಯ ನೀರು ಚರಂಡಿಯಲ್ಲಿ ತುಂಬಿ ಅಂಗಡಿಯ ಬಾಗಿ ಮತ್ತು ಗೋಡೆ ಹಾನಿಗೊಳಗಾಗಿದೆ.
ಕಾಮಗಾರಿಯ ವೇಳೆ ಮುಂಜಾಗ್ರತಾ ಕ್ರಮವನ್ನು ವಹಿಸದೇ ಚರಂಡಿ ಕಾಮಗಾರಿ ನಡೆಸಿದ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಈ ಘಟನೆ ನಡೆದು ನಷ್ಟ ಸಂಭವಿಸಿದೆ. ಅಂಗಡಿಯಲ್ಲಿದ್ದ ಪ್ರಿಡ್ಜ್ ಮತ್ತು ಧವಸ ಧಾನ್ಯಗಳು ಐಸ್ ಕ್ರೀಂ ಇನ್ನಿತರ ವಸ್ತುಗಳು ಹಾಳಾಗಿದ್ದು, ಸುಮಾರು ಮೂರು ಲಕ್ಷದಷ್ಟು ಸಷ್ಟವಾಗಿದ್ದು ಸ್ಥಳಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಮಹಾನಗರ ಪಾಲಿಕೆ ಆಯುಕ್ತರು ಮತ್ತು ಈ ಕಾಮಗಾರಿಗೆ ಸಂಬಧಪಟ್ಟ ಜೂನಿಯರ್ ಇಂಜಿನಿಯರ್ ಜೊತೆ ಮಾತುಕತೆ ನಡೆಸಿ ಕೂಡಲೇ ಈ ಕಾಮಗಾರಿಯ ನಿರ್ಲಕ್ಷತನ ಏನಿದೆ ಅದನ್ನು ಕೂಡಲೇ ಅದಕ್ಕೆ ಕ್ರಮಕೈಗೊಳ್ಳಬೇಕು ಹಾಗೂ ಇದಕ್ಕೆ ಸರಿಯಾದ ಪರಿಹಾರವನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಮಾಜಿ ಕಾರ್ಫೋರೇಟರ್ ನಾಗೇಂದ್ರ ಕುಮಾರ್, ಉದಯ ಕೊಟ್ಟಾರಿ ಸ್ಥಳೀಯ ವಾರ್ಡ್ ಅಧ್ಯಕ್ಷರಾದ ಸುಧಾಕರ್, ಪ್ರಾಣೇಶ್ ರಾವ್, ಸುರೇಶ್, ಪ್ರಶಾಂತ್, ಅಮರನಾಥ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.







