ಆ.17ರಂದು ಕಡಬ ಪಟ್ಟಣ ಪಂಚಾಯತ್ ಚುನಾವಣೆ

ಕಡಬ: ಕಡಬ ಪಟ್ಟಣ ಪಂಚಾಯತ್ ಗೆ ಇದೇ ಮೊದಲ ಬಾರಿ ಆಗಸ್ಟ್ 17 ರಂದು ಚುನಾವಣೆ ನಡೆಯ ಲಿದ್ದು, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದೆ.
ಎರಡು ವಾರ್ಡ್ ಗಳ 13 ಸ್ಥಾನಗಳಿಗೆ ಬಿಜೆಪಿಯು ಕುಸುಮ ಅಂಗಡಿಮನೆ, ಆದಂ ಕುಂಡೋಳಿ, ಅಶೋಕ್ ಪಿ., ಪ್ರಕಾಶ್ ಎನ್.ಕೆ., ಪ್ರೇಮ, ದಯಾನಂದ ಪಿ., ಕುಂಞಣ್ಣ ಕುದ್ರಡ್ಕ, ಗುಣವತಿ ರಘುರಾಮ, ಅಕ್ಷತಾ, ಸದಾನಂದ ನಾಯ್ಕ, ಪ್ರೇಮ, ಗಣೇಶ, ಮೋಹನ ಇವರನ್ನು ಅಭ್ಯರ್ಥಿಗಳಾಗಿ ಘೋಷಿಸಿದ್ದರೆ, ಕಾಂಗ್ರೆಸ್ ಪಕ್ಷವು ಶ್ರೀಮತಿ ತಮನ್ನಾ ಜಬೀನ್, ಮೋಹಿನಿ, ಮಹಮ್ಮದ್ ಫೈಝಲ್, ಸಿ.ಜೆ.ಸೈಮನ್, ಕೆ.ಎಂ.ಹನೀಫ್, ಲೀಲಾವತಿ ಶಿವರಾಂ, ರೋಹಿತ್ ಗೌಡ, ಅಶ್ರಫ್ ಶೇಡಿಗುಂಡಿ, ಕೃಷ್ಣಪ್ಪ ಪೂಜಾರಿ, ತುಳಸಿ ಗಣೇಶ್, ಜ್ಯೋತಿ ಗೌಡ ಡಿ.ಕೋಲ್ಪೆ, ಉಮೇಶ್ ಮಡ್ಯಡ್ಕ ಹಾಗೂ ಕೃಷ್ಣಪ್ಪ ನಾಯ್ಕ್ ರನ್ನು ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಅಲ್ಲದೇ ಎಸ್ಡಿಪಿಐ ಮತ್ತು ಆಮ್ ಆದ್ಮಿ ಪಕ್ಷವು ಸ್ಪರ್ಧಿಸುವುದಾಗಿ ಈಗಾಗಲೇ ಪ್ರಕಟಿಸಿದೆ.
Next Story





