ಎಪ್ರಿಲ್ 19 ರಿಂದ ಕಾಜೂರು ಮಖಾಂ ಉರೂಸ್
ಪೋಸ್ಟರ್ ಬಿಡುಗಡೆಗೊಳಿಸಿದ ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಆಧ್ಯಾತ್ಮಿಕ ಕೇಂದ್ರವಾದ, ಇತಿಹಾಸ ಪ್ರಸಿದ್ಧ ಕಾಜೂರು ಮಖಾಂ ಶರೀಫ್ ಉರೂಸ್ ಕಾರ್ಯಕ್ರಮವು 2024 ಎಪ್ರಿಲ್ 19 ರಿಂದ 28 ರ ತನಕ ನಡೆಯಲಿದ್ದು, ಅದರ ಪೋಸ್ಟರ್ ಅನ್ನು ರಹ್ಮಾನಿಯಾ ಜುಮ್ಮಾ ಮಸ್ಜಿದ್ ಮತ್ತು ದರ್ಗಾ ಶರೀಫ್ ಕಾಜೂರ್ ಗೌರವಾಧ್ಯಕ್ಷರೂ, ಸಮಸ್ತ ಕೇರಳ ಕೇಂದ್ರ ಮುಶಾವರಾ ಉಪಾಧ್ಯಕ್ಷರೂ ಆದ ಸಯ್ಯಿದ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ರವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಉರೂಸ್ ಸಮಿತಿ ಅಧ್ಯಕ್ಷರಾದ ಜನಾಬ್ ಕೆ.ಯು ಇಬ್ರಾಹಿಂ.ಪ್ರಧಾನ ಕಾರ್ಯದರ್ಶಿ ಜೆಎಚ್ ಅಬೂಬಕ್ಕರ್ ಸಿದ್ದೀಕ್, ಪ್ರಮುಖರಾದ ಎಂ.ಎ ಕಾಸಿಂ ಮಲ್ಲಿಗೆ ಮನೆ, ಬದ್ರುದ್ದೀನ್ ಕಾಜೂರ್, ಎ.ಯು ಮುಹಮ್ಮದ್ ಅಲಿ ಉಪಸ್ಥಿತರಿದ್ದರು.
Next Story





