ಕಲಾವರ್ಧಕ ಯುವಕ ಮಂಡಲ ಸಂಘದ ಸುವರ್ಣ ಮಹೊತ್ಸವ ಸಮಾರಂಭ; ಮಾರ್ಚ್ 2ರಂದು ನೂತನ ಕಟ್ಟಡದ ಉದ್ಘಾಟನೆ

ಮಂಗಳೂರು : ಕಲಾವರ್ಧಕ ಯುವಕ ಮಂಡಲ ಸಂಘ ನಾರಳ ಸಂಕೇಶ ಮಂಗಳೂರು ಇದರ ಸುವರ್ಣ ಮಹೋತ್ಸವ ಅಂಗವಾಗಿ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭವನ್ನು ಮಾರ್ಚ್ 2ರಂದು ಹಮ್ಮಿಕೊಳ್ಳಲಾಗಿದೆ.
ಗಂಜಿಮಠದ ಮಹಾಗಣಪತಿ ದೇವಸ್ಥಾನದ ಅರ್ಚಕರಾದ ಗಣೇಶ ಭಟ್, ಶ್ರೀಪತಿ ಆಚಾರ್ಯ ನಾರಳ, ಎಂ.ಹರಿ ರಾವ್, ಸೂರ್ಯನಾರಾಯಣ ಭಟ್ ನಾರಳದೋಟ ಅವರು ದೀಪ ಉರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ನೂತನ ಕಟ್ಟಡದ ಉದ್ಘಾಟನೆಯನ್ನು ಉದ್ಯಮಿ ರಘುನಾಥ ಸಾಮಾನಿ ನೆರವೇರಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಗಣೇಶ್ ಭಟ್ ವಹಿಸಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹೇಶ ಕುಮಾರ್ ಹೊಳ್ಳ, ಕರುಣಾಕರ ಶೆಟ್ಟಿ ತರೋಳಿ, ಗುರುರಾಜ ನಾರಳ, ರಮೇಶ್ ಆಳ್ವ, ಗಿರೀಶ್ ಕುಮಾರ್, ಮೋಹನದಾಸ್ ನಾಯ್ಕ್, ರಾಜೇಂದ್ರ ಮೇಂಡ, ಪ್ರಕಾಶ್ ನಾಯ್ಕ್, ಗಣೇಶ್ ಕೋಟ್ಯಾನ್, ಜೆಸಿಂತಾ ಡಿ ಕುನ್ಹ, ರಾಮಮೋಹನ ರಾವ್, ಎಸ್. ಮಹಮ್ಮದ್ ಹಮೀದ್, ರಾಮಪ್ಪ ಆಚಾರ್ಯ ಅವರು ಪಾಲ್ಗೊಳ್ಳಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ಸ್ಥಳೀಯ ಎಸ್ಸೆಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಗುವುದು. ಸುವರ್ಣ ಸಂಭ್ರಮದಲ್ಲಿ ಬೆಳಿಗ್ಗೆ 10.30ಕ್ಕೆ ಕಲಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಉದ್ಘಾಟನೆಯನ್ನು ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಅರ್ಚಕರಾದ ವೇದಮೂರ್ತಿ ನಾರಾಯಣ ಭಟ್ ನೆರವೇರಿಸಲಿದ್ದಾರೆ.
ಆ ಬಳಿಕ ವಿವಿಧ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ಇರಲಿದೆ.
ಬೆಳಿಗ್ಗೆ 11 ರಿಂದ 1 ಗಂಟೆಯವರೆಗೆ ಗುರುಪುರ ಕೈಕಂಬ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಂದ “ಗಜೇಂದ್ರ ಮೋಕ್ಷ” ಯಕ್ಷಗಾನ ಪ್ರದರ್ಶನ, ಮಧ್ಯಾಹ್ನ 1 ರಿಂದ 1.30 ವರೆಗೆ ಅಂಗನವಾಡಿ ಮಕ್ಕಳ ನೃತ್ಯ, ಮಧ್ಯಾಹ್ನ 1.30 ರಿಂದ 2.30 ರವರೆಗೆ ಕಲಾಚೇತನಾ ಯುವತಿ ಮಂಡಲ ನಾರಳ ಸಂಕೇಶ ಇದರ ಸದಸ್ಯೆಯರಿಂದ “ಪೊಣ್ಣು ಸಂಸಾರದ ಕಣ್” ವಿಷಯಾಧಾರಿತ ನೃತ್ಯ ರೂಪಕ, ಮಧ್ಯಾಹ್ನ 2.30 ರಿಂದ 5.30 ರವರೆಗೆ ಕಲಾವರ್ಧಕ ಯುವಕ ಮಂಡಲದ ಸದಸ್ಯರಿಂದ - ಸ್ಥಳೀಯ ಪ್ರತಿಭೆಗಳಿಂದ “ವೈವಿಧ್ಯಮಯ ನೃತ್ಯ ಕಾರ್ಯಕ್ರಮ”, ಸಂಜೆ 5.30 ರಿಂದ 6.30 ರವರೆಗೆ ಕಲಾವರ್ದಕ ಯುವಕ ಮಂಡಲದ ಸದಸ್ಯರಿಂದ “ಮಾನವೀಯತೆ” ಇದು ಮನಸ್ಸುಗಳ ಕಥೆ ಎಂಬ ವಿನೂತನ ಶೈಲಿಯ ನೃತ್ಯ ರೂಪಕ, ಸಂಜೆ 6.30ರಿಂದ ಸಭಾ ಕಾರ್ಯಕ್ರಮ ಹಾಗೂ ಸಾಧಕರಿಗೆ ಮತ್ತು ಯುವಕ ಮಂಡಲದ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ರಾತ್ರಿ 9.00 ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಿನಕರ ಭಂಡಾರಿ ಕಣಂಜಾರು ನಿರ್ದೇಶನದ “ಪಿರ ಬನ್ನಗ” ಸಾಮಾಜಿಕ ಹಾಸ್ಯಮಯ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
ಸಂಜೆ 6.30ಕ್ಕೆ ಸುವರ್ಣ ಮಹೋತ್ಸವ ಸಭಾ ಕಾರ್ಯಕ್ರಮವು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಂ. ಮೋಹನ್ ಆಳ್ವ ಅವರ ಅಧಕ್ಷತೆಯಲ್ಲಿ ನಡೆಯಲಿದ್ದು, ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಡಾ.ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಯು.ಟಿ.ಖಾದರ್, ನಳೀನ್ ಕುಮಾರ್ ಕಟೀಲ್, ವಾಣಿ ಆಳ್ವ ಮೊದಲಾದವರು ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.