ಕಲ್ಕಟ್ಟ: ಉಚಿತ ಸ್ತ್ರೀ ರೋಗ ಪರೀಕ್ಷೆ ಹಾಗೂ ಕಣ್ಣಿನ ತಪಾಸಣಾ ಶಿಬಿರ

ಕೊಣಾಜೆ: ಬೆಳಕು ಚಾರಿಟೇಬಲ್ ಟ್ರಸ್ಟ್ ಮುಡಿಪು(ರಿ) ವತಿಯಿಂದ ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಹಾಗೂ ವಿಕೇರ್ ಹೆಲ್ತ್ ಮತ್ತು ಐ ಸೆಂಟರ್ ಸಹಯೋಗದೊಂದಿಗೆ ಉಚಿತ ಸ್ತ್ರೀ ರೋಗ ಪರೀಕ್ಷೆ ಮತ್ತು ಚಿಕಿತ್ಸೆ ಹಾಗೂ ಕಣ್ಣಿನ ತಪಾಸಣಾ ಶಿಬಿರ ಕಲ್ಕಟ್ಟ ಕೈರಾಲಿ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಡಾ ಅನಿತಾ ಲೋಬೋ ಶಿಬಿರಕ್ಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಗ್ರಾಮೀಣ ಪ್ರದೇಶದ ಮಹಿಳೆಯರು ತನ್ನ ದೇಹದ ರೋಗದ ಬಗ್ಗೆ ವೈದ್ಯರ ಬಳಿ ಮುಕ್ತವಾಗಿ ಹಂಚಿಕೊಳ್ಳಲು ಹಿಂಜರಿಯುತ್ತಾರೆ. ಈ ಕಾರಣದಿಂದ ಅದೆಷ್ಟೋ ಮಂದಿ ರೋಗದಿಂದ ಸಾವನ್ನಪ್ಪುವರ ಸಂಖ್ಯೆ ಹೆಚ್ಚಾಗುತ್ತಿದೆ. ರೋಗಿಗಳು ವೈದ್ಯರ ಬಳಿ ತನ್ನ ಸಮಸ್ಯೆಯನ್ನು ಮುಕ್ತವಾಗಿ ಹಂಚಿಕೊಂಡಾಗ ರೋಗ ಗುಣಮುಖವಾಗಲು ಸಾಧ್ಯ ಎಂದು ಹೇಳಿದರು.
ಬೆಳಕು ಚಾರಿಟೇಬಲ್ ಟ್ರಸ್ಟ್ ಮುಡಿಪು(ರಿ) ಅಧ್ಯಕ್ಷ ಪ್ರಸನ್ನ ಎಮ್.ಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬೆಳಕು ಚಾರಿಟೇಬಲ್ ಟ್ರಸ್ಟ್ ನಿರಂತರವಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದು ಎಲ್ಲರ ಸಹಾಯದೊಂದಿಗೆ ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಯನ್ನು ರೂಪಿಸಲಗುವುದು ಎಂದು ಹೇಳಿದರು.
ದೇರಳಕಟ್ಟೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಡಾ ಶೈನಾಝ್, ಬೆಳಕು ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿಗಳಾದ ಶಂಕರಾಯ ಭಟ್, ಅಬ್ದುಲ್ ಲತೀಫ್ ಕೈರಾಲಿ, ಥೋಮಸ್, ರಜಾತ್ ವೆಗಸ್, ಸಂತೋಷ್, ನವೀನ್ ಡಿಸೋಜಾ, ಸಲಹೆಗಾರರಾದ ಪ್ರೋ. ಪುರುಷೋತ್ತಮ, ವಿಕ್ಟರ್ ಉಪಸ್ಥಿತರಿದ್ದರು.