ಕಲ್ಕಟ್ಟ ಮದ್ರಸ ವಿದ್ಯಾರ್ಥಿನಿಯರ ಮೀಲಾದ್ ಫೆಸ್ಟ್

ದೇರಳಕಟ್ಟೆ; ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಆಶ್ರಯದಲ್ಲಿ ಮದ್ರಸ ವಿದ್ಯಾರ್ಥಿನಿಯರ ಮೀಲಾದುನ್ನಬಿ ಪ್ರಯುಕ್ತ ಮೀಲಾದ್ ಫೆಸ್ಟ್ ಕಾರ್ಯಕ್ರಮ ಮದ್ರಸ ಹಾಲ್ ನಲ್ಲಿ ಸೋಮವಾರ ನಡೆಯಿತು.
ಇಲ್ಯಾಸ್ ಜುಮಾ ಮಸೀದಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ದುಆ ನೆರವೇರಿಸಿದರು.
ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಮೋನು ಕಾರ್ಯಕ್ರಮ ಉದ್ಘಾಟಿಸಿ ಮೀಲಾದ್ ಕಾರ್ಯಕ್ರಮ ದಲ್ಲಿ ವಿದ್ಯಾರ್ಥಿನಿಯರು ಕೂಡ ಮೇಲುಗೈ ಸಾಧಿಸಬೇಕು ಎಂದು ಕರೆ ನೀಡಿದರು.
ಮದ್ರಸ ಉಸ್ತುವಾರಿ ಮೊಯ್ದಿನ್ ಮೋನು , ಪತ್ರಕರ್ತ ಬಶೀರ್ ಕಲ್ಕಟ್ಟ ಮಾತನಾಡಿದರು.
ಸದ್ ರ್ ಉಸ್ತಾದ್ ಶರೀಫ್ ಸ ಅದಿ ಸ್ವಾಗತಿಸಿದರು.
ಮುಅಲ್ಲಿಂ ರಝಾಕ್ ಸ ಅದಿ, ಹಸನ್ ಸ ಅದಿ ಕಾರ್ಯಕ್ರಮ ನಿರೂಪಿಸಿದರು. ಇಸಾಕ್ ಸಅದಿ ದನ್ಯವಾದ ಸಮರ್ಪಿಸಿದರು.
Next Story





