ಕಲ್ಕಟ್ಟ | ಇಲ್ಯಾಸ್ ಜುಮಾ ಮಸೀದಿಯಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಉಳ್ಳಾಲ: ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಕಲ್ಕಟ್ಟ ಇದರ ಆಶ್ರಯದಲ್ಲಿ 77ನೇ ಗಣರಾಜ್ಯೋತ್ಸವ ಸಮಾರಂಭ ಮದ್ರಸ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಖತೀಬ್ ಇಸ್ಹಾಕ್ ಸಖಾಫಿ ನಂದಾವರ ದುಆ ನೆರವೇರಿಸಿ ಗಣರಾಜ್ಯೋತ್ಸವದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಗೌರವ ಅಧ್ಯಕ್ಷ ಪೊಡಿಯಬ್ಬ ಹಾಜಿ, ಉಪಾಧ್ಯಕ್ಷ ಮುಹಮ್ಮದ್ ಹಾಜಿ ಕಂಡಿಕ ಧ್ವಜಾರೋಹಣಗೈದರು. ಸದುರ್ ಉಸ್ತಾದ್ ಶೆರೀಫ್ ಸಅದಿ, ಮುಅಲ್ಲಿಂ ಅಬ್ದುಲ್ ರಝಾಕ್ ಸಅದಿ, ಕಾರ್ಯದರ್ಶಿ ಹಸೈನಾರ್ ತಟ್ಲ, ಮುಹಮ್ಮದ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು. ಬಶೀರ್ ಕಲ್ಕಟ್ಟ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಮೋನು ಕಲ್ಕಟ್ಟ ವಂದಿಸಿದರು.
Next Story





