ಸಂಚಾರಕ್ಕೆ ಮುಕ್ತಗೊಂಡ ಕಲ್ಲಡ್ಕ ಫ್ಲೈ ಓವರ್

ಮಂಗಳೂರು, ಜೂ.2: ಕಳೆದ ಸುಮಾರು ಎಂಟು ವರ್ಷಗಳಿಂದ ನಡೆದ ಕಾಮಗಾರಿಯ ಬಳಿಕ ಕಲ್ಲಡ್ಕ ಫ್ಲೈ ಓವರ್ ಸೋಮವಾರ (ಜೂ.2)ದಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಂಡಿದೆ.
ಮಾಣಿ (ಬೆಂಗಳೂರು)ಯಿಂದ ಬಿ.ಸಿ.ರೋಡ್ (ಮಂಗಳೂರು)ಗೆ ಆಗಮಿಸುವ ಫ್ಲೈ ಓವರ್ ರಸ್ತೆಯಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್ ಎಚ್ ಎ ಐ) ಅನುವು ಮಾಡಿದೆ.
ರಾಷ್ಟ್ರೀಯ ಹೆದ್ದಾರಿ 75ರ ಬಂಟ್ವಾಳ ಕಲ್ಲಡ್ಕದಲ್ಲಿ 2.1 ಕಿ.ಮೀ. ಉದ್ದದ ಫ್ಲೈಓವರ್ ನಿರ್ಮಾಣ ಕಾಮಗಾರಿ ಬಿ.ರೋಡ್ನಿಂದ ಅಡ್ಡಹೊಳೆವರೆಗೆ 64 ಕಿ.ಮೀ. ಉದ್ದದ ಹೆದ್ದಾರಿ ಕಾಮಗಾರಿಯ ಭಾಗವಾಗಿ 2017ರಲ್ಲಿ ಆರಂಭಗೊಂಡಿತ್ತು. ಹಲವು ಕಾರಣಗಳಿಂದ ವಿಳಂಬಗೊಂಡು ಕುಂಟುತ್ತಾ ಸಾಗಿದ ಫ್ಲೈ ಓವರ್ ಕಾಮಗಾರಿ ಇದೀಗ ಪೂರ್ಣಗೊಂಡಿದೆ.
Next Story