ಕಲ್ಲಡ್ಕ: ಹೃದಯಾಘಾತದಿಂದ ಹೋಟೆಲ್ ಅಬ್ಬು ನಿಧನ

ಬಂಟ್ವಾಳ : ಕಲ್ಲಡ್ಕ ಸಮೀಪದ ಬಹದ್ದೂರ್ ರೋಡ್ ನಿವಾಸಿ ಅಬೂಬಕ್ಕರ್ ಯಾನೆ ಹೋಟೆಲ್ ಅಬ್ಬು (70) ಹೃದಯಾಘಾತದಿಂದ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಹಲವಾರು ವರ್ಷಗಳಿಂದ ಕಲ್ಲಡ್ಕ ಮಸೀದಿ ಕಟ್ಟಡದಲ್ಲಿ ಹೋಟೇಲ್ ಉದ್ಯಮ ನಡೆಸುತ್ತಿದ್ದ ಅವರು ಅಬ್ಬುವಾಕ ಎಂದು ಜನಾನುರಾಗಿಯಾಗಿದ್ದರು. ಅವರಿಗೆ ಮಂಗಳವಾರ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ರಾತ್ರಿ 9.30 ರ ವೇಳೆಗೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಸಂಖ್ಯೆಯ ಬಂಧು ಬಳಗವನ್ನು ಅಗಲಿದ್ದಾರೆ. ಗುರುವಾರ ಬೆಳಿಗ್ಗೆ 10 ಗಂಟೆಯ ವೇಳೆಗೆ ಮೃತರು ಅಂತಿಮ ಕಾರ್ಯ ಕಲ್ಲಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬಿಕರು ತಿಳಿಸಿದ್ದಾರೆ.
Next Story





