ಕಲ್ಲರಕೋಡಿ: ಸರಕಾರಿ ಹಿ.ಪ್ರಾ ಶಾಲೆಯಲ್ಲಿ79ನೇ ಸ್ವಾತಂತ್ರ್ಯ ದಿನಾಚರಣೆ

ನರಿಂಗಾನ: ಕಲ್ಲರಕೋಡಿ ದ.ಕ.ಜಿ.ಪಂ.ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ನವಾಝ್ ಎಂ.ಬಿ ಧ್ವಜರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನದ ಸಂದೇಶ ನೀಡಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಅಶ್ರಫ್ ಎಸ್.ಎಚ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷರಾದ ಜ್ಯೊತಿ ಡಿಸೋಜ, ಪಂಚಾಯತ್ ಸದಸ್ಯರಾದ ಜಯಂತಿ, ಶಾಂತಿ ಡಿಸೋಜ, ಸಾಬೀರಾ, ಪಂಚಾಯತ್ ಪಿಡಿಒ ರಜನಿ, ಎಸ್‌ಡಿಎಂಸಿ ಸದಸ್ಯರಾದ ನಾರಾಯಣ ಭಟ್, ಸಲಾಂ ಎಮ್.ಎಚ್, ಆಸೀಫ್ ಕೆ.ಎಚ್, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಶೇಖರ್ ಶೆಟ್ಟಿ, ಮಾಧವ ಪೂಜಾರಿ, ಅಬ್ದುಲ್ ರಝಾಕ್, ರೋಮ್ರಿಕ್ ಡಿಸೋಜ, ಪ್ರೇಮಾನಂದ ರೈ, ಇಬ್ರಾಹಿಂ ಪಾರೆ, ಐತಪ್ಪ ಶೆಟ್ಟಿ, ಅಬೂಬಕರ್, ಮಹಮ್ಮದ್ ಬಶೀರ್, ನೀತಾ ವೇಗಸ್, ಮೋಹನ್, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕರಾದ ಪ್ರಭಾಕರ್ ಕಾರ್ಯಕ್ರಮ ನಿರೂಪಿಸಿದರು.
Next Story







