ಕಲ್ಲಿಕೋಟೆ | ಮನುಷ್ಯನ ದೈನಂದಿನ ಬದುಕಿನಲ್ಲಿ ಭಾಷೆಗಳ ಪಾತ್ರ ಅಪಾರ : ಎ.ಪಿ.ಉಸ್ತಾದ್

ಕಲ್ಲಿಕೋಟೆ, ನ.26: ಭಾಷೆಗಳ ವೈವಿಧ್ಯತೆ ಅಲ್ಲಾಹನ ಅನುಗ್ರಹವಾಗಿದೆ. ಪ್ರತಿಯೊಂದು ಭಾಷೆಗೂ ತನ್ನದೇ ಆದ ವೈಶಿಷ್ಟ್ಯವಿದೆ. ಭಾಷೆಗಳು ಸೌಂದರ್ಯದ ಆಗರವೂ ಆಗಿದೆ. ಭಾಷಾ ಕಲಿಕೆ ಮನುಷ್ಯನಿಗೆ ಅನಿವಾರ್ಯವಾಗಿದೆ. ಮನುಷ್ಯನ ದೈನಂದಿನ ಬದುಕಿನಲ್ಲಿ ಭಾಷೆಗಳ ಪಾತ್ರ ಅಪಾರವೂ ಆಗಿದೆ. ಇಸ್ಲಾಮಿನ ಪ್ರಭೋಧನೆಯಲ್ಲಿ ಭಾಷೆಯ ಕಲಿಕೆ ಅತ್ಯಮೂಲ್ಯವಾಗಿದೆ’ ಎಂದು ಶೈಖುನಾ ಸುಲ್ತಾನುಲ್ ಉಲಮಾ ಗ್ರ್ಯಾಂಡ್ ಮುಫ್ತಿ ಎ.ಪಿ. ಉಸ್ತಾದ್ ಹೇಳಿದರು.
ಜಾಮಿಯಾ ಮರ್ಕಝುಸ್ಸಖಾಫತಿಸ್ಸುನ್ನಿಯ್ಯಾದ ಕನ್ನಡ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬ ಇಝ್ದಿಹಾರ್ ಎಂಟನೇ ಆವೃತ್ತಿಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಡಾ.ಫಾಝಿಲ್ ರಝ್ವಿ ಕಾವಳಕಟ್ಟೆ, ಮರ್ಕಝ್ ಡೈರೆಕ್ಟರ್ ವಿ.ಪಿ.ಎಂ. ಫೈಝಿ ವಿಳ್ಯಾಪಳ್ಳಿ, ಡಾ.ಗಫೂರ್ ಅಝ್ಹರಿ, ನೌಶಾದ್ ಸಖಾಫಿ, ಅಬ್ದುಲ್ಲಾ ಸಖಾಫಿ ಮಲಯಮ್ಮ, ಬಶೀರ್ ಸಖಾಫಿ, ಸುಹೈಲ್ ಸಖಾಫಿ, ಸತ್ತಾರ್ ಸಖಾಫಿ ಹಾಗೂ ಜಾಮಿಯಾದ ಮುದರ್ರಿಸರು ಉಪಸ್ಥಿತರಿದ್ದರು.
ಮರ್ಕಝ್ ಕೆಎಸ್ಒ ಪ್ರಧಾನ ಕಾರ್ಯದರ್ಶಿ ಸಲಾಂ ಬೊಳ್ಮಾರ್ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಹಾಫಿಳ್ ನೌಫಲ್ ಮಂಜನಾಡಿ ವಂದಿಸಿದರು. ಅಶ್ರಫ್ ನಾವೂರು ಕಾರ್ಯಕ್ರಮ ನಿರೂಪಿಸಿದರು.





