ಕಣಚೂರು: ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಾಗಾರ

ಕೊಣಾಜೆ: ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜು ದೇರಳಕಟ್ಟೆ ಇದರ 2025- 26ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕಾರ್ಯಗಾರವು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿವಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಪ್ರೀತಿ ಕೀರ್ತಿ ಡಿಸೋಜ ಅವರು, " ವಿದ್ಯಾರ್ಥಿಗಳು ಉತ್ತಮ ಗುರಿಯೊಂದಿಗೆ ಯಶಸ್ಸನ್ನು ಗಳಿಸಬೇಕಾದರೆ ಅದರಲ್ಲಿ ಪೋಷಕರ ಪಾತ್ರ ಮತ್ತು ಸಹಕಾರಗಳು ಬಹಳ ಮುಖ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷರಾದ ಕಣಚೂರ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ನ ಸಂಚಾಲಕರಾದ ಅಬ್ದುಲ್ ರೆಹಮಾನ್ ಅವರು, "ಪ್ರತಿಯೊಬ್ಬ ವಿದ್ಯಾರ್ಥಿಯು ಏನಾದರೂ ಒಂದು ಸಾಧನೆ ಮಾಡಿ ಸಮಾಜದಲ್ಲಿ ತನ್ನನು ಗುರುತಿಸಿಕೊಂಡು ನಿಷ್ಠಾವಂತ ಪ್ರಜೆಯಾಗಬೇಕು" ಎಂದರು. ಪ್ರಾಂಶುಪಾಲೆ ಶಾಹಿದಾ ರವರು ಕಾಲೇಜಿನ ಶಿಸ್ತು ಹಾಗೂ ನಿಯಮಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು. ಕಣಚೂರು ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಇಕ್ಬಾಲ್ ಅಹಮದ್ ಯು ಟಿ, ಕಣಚೂರು ಪಬ್ಲಿಕ್ ಸ್ಕೂಲಿನ ಪ್ರಾಂಶುಪಾಲರಾದ ಕ್ಯಾರನ್ ಡಿಸೋಜ, ಪ್ರೈಮರಿ ಸ್ಕೂಲಿನ ಪ್ರಾಂಶುಪಾಲರಾದ ಲಿನೆಟ್ ಡಿಸೋಜಾ ಹಾಗೂ ಕಣಚೂರು ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶಾಹಿದಾ ಕಲ್ಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಉಪನ್ಯಾಸಕಿಯಾದ ಚೇತನಾ ಅತಿಥಿಗಳನ್ನು ಪರಿಚಯಿಸಿದರು. ಉಪನ್ಯಾಸಕಿ ಪ್ರಮಿತಾ ಕಾರ್ಯಕ್ರಮವನ್ನು ನಿರೂಪಿಸಿ, ಉಪನ್ಯಾಸಕಿ ಸಾಜಿದ ವಂದಿಸಿದರು.





