ಕಣಚೂರು ವೈದ್ಯಕೀಯ ಕಾಲೇಜು: ಪ್ರಶಸ್ತಿ ಪ್ರದಾನ ಸಮಾರಂಭ, "ಪ್ಲೆಕ್ಸಸ್ - 2006" ಕಾರ್ಯಕ್ರಮ

ಕೊಣಾಜೆ: ವೈದ್ಯರು ಕೇವಲ ಬಿಳಿ ಕೋಟ್ ಧರಿಸಿದ ವೃತ್ತಿಪರರು ಮಾತ್ರವಲ್ಲ. ಅವರು ನಿಜ ಜೀವನದ ಹೀರೋ ಗಳು. ಜೀವ ರಕ್ಷಿಸುವ ಅವರ ಸೇವೆ ಅತ್ಯಂತ ಸಮರ್ಪಣೆಯ ಫಲವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿಗಳು ಮೊಹಮ್ಮದ್ ಮೊಹ್ಸಿನ್ ಐಎಎಸ್ ಅಭಿಪ್ರಾಯಪಟ್ಟರು.
ಅವರು ಕಣಚೂರು ವೈದ್ಯಕೀಯ ಕಾಲೇಜು ಕ್ಯಾಂಪಸ್ ನ ಕಾನ್ಫರೆನ್ಸ್ ಡ್ರೋಮ್ ನಲ್ಲಿ ನಡೆದ ದಶಕದ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಾರ್ಷಿಕ ದಿನಾಚರಣೆಯ " ಪ್ಲೆಕ್ಸಸ್ -2006" ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕೇವಲ ಪದವಿ ಅಂಕಗಳು ಮಾತ್ರ ಉತ್ತಮ ವೈದ್ಯರನ್ನು ನಿರ್ಧರಿಸುವುದಿಲ್ಲ. ಚಿಕಿತ್ಸಾ ಕೌಶಲ್ಯ, ಪ್ರಾಯೋಗಿಕ ಅನುಭವ ಮತ್ತು ಸಂವಹನ ಕೌಶಲ್ಯಗಳು ಅತ್ಯಂತ ಮುಖ್ಯ. ರೋಗಿಗಳೊಂದಿಗೆ ಸರಿಯಾದ ಸಂವಹನ ನಡೆಯು ವುದೇ ಉತ್ತಮ ಚಿಕಿತ್ಸೆಗೆ ನೆಲೆ. ವೈದ್ಯಕೀಯ ವೃತ್ತಿಯಲ್ಲಿ ನೈತಿಕತೆ ಬಹುಮುಖ್ಯ ಎಂದರು.
ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್‌ನ ಅಧ್ಯಕ್ಷ ಪ್ರೊ. ಯು.ಟಿ.ಇಫ್ತಿಕಾರ್ ಆಲಿ ಫರೀದ್ ಮಾತನಾಡಿ, ಆರೋಗ್ಯ ಸೇವಾ ಕ್ಷೇತ್ರದಲ್ಲಿ ದೇಹಭಾಷೆ ಮತ್ತು ವೃತ್ತಿಪರ ಮನೋಭಾವ ಅತ್ಯಂತ ಮುಖ್ಯ. ಮಾತು ಮಾತ್ರವಲ್ಲ, ನಮ್ಮ ನಡೆ-ನುಡಿ, ರೋಗಿಯೊಂದಿಗೆ ನಡೆಸುವ ವರ್ತನೆ ಅವರ ವಿಶ್ವಾಸವನ್ನು ಗೆಲ್ಲುತ್ತದೆ. ವೈದ್ಯಕೀಯ ವೃತ್ತಿಯಲ್ಲಿ ಗೌರವವು ಪದವಿ ಅಥವಾ ಹುದ್ದೆಯಿಂದ ಅಲ್ಲ, ನಮ್ಮ ಕಾರ್ಯಕ್ಷಮತೆ ಮತ್ತು ಸೇವೆಯಿಂದಲೇ ದೊರೆಯುತ್ತದೆ ಎಂದರು.
ಈ ಸಂದರ್ಭ ಕಣಚೂರು ಇಸ್ಲಾಮಿಕ್ ಎಜ್ಯುಕೇಷನ್ ಟ್ರಸ್ಟ್ ನ ಚೇರ್ ಮೆನ್ ಯು.ಕಣಚೂರು ಮೋನು ಅಧ್ಯಕ್ಷತೆ ವಹಿಸಿದ್ದರು.
ಕಣಚೂರು ಸಂಸ್ಥೆಯ ಗೌರವ ಸಲಹೆಗಾರರಾದ ಡಾ.ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಡಾ.ಎಂ. ವೆಂಕಟ್ರಾಯ ಪ್ರಭು, ವೈದ್ಯಕೀಯ ಅಧೀಕ್ಷಕ ಡಾ.ಅಂಜನ್, ಆಡಳಿತಾಧಿಕಾರಿ ಡಾ.ರೋಹನ್ ಮೋನಿಸ್, ಕಣಚೂರು ಆರೋಗ್ಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ಸ್ವಾಗತಿಸಿದರು. ವೈದ್ಯಕೀಯ ಕಾಲೇಜು ಡೀನ್ ಡಾ. ಶಹನವಾಝ್ ಮಾಣಿಪ್ಪಾಡಿ ವಾರ್ಷಿಕ ವರದಿ ವಾಚಿಸಿದರು. ಡಾ ದೀಪಿಕಾ ಕಾಮತ್ ವಂದಿಸಿದರು.







