ಅಡ್ಡೂರು ಸಹರಾ ಶಾಲೆಯಲ್ಲಿ ಕರಾಟೆ ಪಂದ್ಯಾಟ

ಮಂಗಳೂರು: ದ.ಕ.ಜಿಪಂ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯ ಕಚೇರಿ, ಮಂಗಳೂರು ದಕ್ಷಿಣ ವಲಯ ಹಾಗೂ ಅಡ್ಡೂರಿನ ಸಹರಾ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಶನಿವಾರ ಶಾಲೆಯ ಸಭಾಂಗಣದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಲಕ-ಬಾಲಕಿಯರ ತಾಲೂಕು ಮಟ್ಟದ ಕರಾಟೆ ಪಂದ್ಯಾಟ ನಡೆಯಿತು.
ಮಂಗಳೂರು ದಕ್ಷಿಣ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕಿ ಲಿಲ್ಲಿ ಪಾಯಸ್ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕರಾಟೆ ಜೀವನಕ್ಕೆ ಶಿಸ್ತು ನೀಡುವ ಕ್ರೀಡೆ. ಇಲ್ಲಿ 14 ಮತ್ತು 17ರ ವಯೋಮಾನದ 2 ಕೆಟಗರಿಯಲ್ಲಿ ಕರಾಟೆ ಪಂದ್ಯಾಟ ನಡೆಯಲಿದೆ. ಈ ಬಾರಿ ಕರಾಟೆ ಪಂದ್ಯಾಟಕ್ಕೆ ಕೆಲವು ಹೊಸ ನಿಯಮ ರೂಪಿಸಲಾಗಿದೆ. ಮಕ್ಕಳು ವಯೋಮಾನಕ್ಕೆ ತಕ್ಕಂತೆ ಪಂದ್ಯಾಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಕೇಶವ ಎಚ್., ಗುರುಪುರ ಹೋಬಳಿ ಕ್ರೀಡಾಕೂಟಗಳ ನೋಡೆಲ್ ಅಧಿಕಾರಿ ಲ್ಯಾನ್ಸಿ ಸಿಕ್ವೇರ, ಮಂಗಳೂರು ತಾಲೂಕು ದಕ್ಷಿಣ ವಲಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶೇಖರ ಕಡ್ತಲ, ಪ್ರಧಾನ ಕಾರ್ಯದರ್ಶಿ ಮೋಹನ ಶಿರ್ಲಾಲು, ಸಹರಾ ಶಿಕ್ಷಣ ಸಂಸ್ಥೆಯ ಸಂಚಾಲಕ ಎ.ಕೆ. ಇಸ್ಮಾಯಿಲ್, ಮಂಡಳಿ ಸದಸ್ಯರಾದ ಎ.ಕೆ. ಮುಹಮ್ಮದ್, ಎ.ಜೆ. ಅಬ್ದುಲ್ ಖಾದರ್, ಅಝೀಝ್, ಹಸನ್ ಬಾವ, ಕರಾಟೆ ಶಿಕ್ಷಕ ಮುಹಮ್ಮದ್ ಆದಂ ಭಾಗವಹಿಸಿದ್ದರು.
ಶಾಲಾ ಶಿಕ್ಷಕಿ ಅಶ್ವಿತಾ ಸ್ವಾಗತಿಸಿದರು. ಶಿಕ್ಷಕಿಯರಾದ ಹೇಮಾಶ್ರೀ ಮತ್ತು ಅಸ್ಮಾ ನಿರೂಪಿಸಿದರು. ಶಿಕ್ಷಕಿ ಹರ್ಷಿತಾ ವಂದಿಸಿದರು.







