ಕಾರ್ಕಳ | ಕಳ್ಳತನ ಆರೋಪ ಹೊರಿಸಿ ಹಲ್ಲೆ : ದೂರು

ಕಾರ್ಕಳ, ನ.28: ಕಳ್ಳತನದ ಆರೋಪ ಹೊರಿಸಿ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಕ್ಕುಂದೂರು ಗ್ರಾಮದ ಪೊಸನೊಟ್ಟು ನಿವಾಸಿ ಸುರೇಶ್(28)ಹಲ್ಲೆಗೊಳಗಾದವರು. ಶಿವರಾಜ್, ಶಶಿಕಿರಣ, ಹೇಮಂತ್, ವಿಜೇಶ್ ಹಲ್ಲೆ ನಡೆಸಿದ ಆರೋಪಿಗಳು.
ಆರೋಪಿಗಳು ನ.23ರಂದು ಬೆಳಗಿನ ಜಾವ ಸುರೇಶ್ ಎಂಬವರ ಮನೆಯ ಬಳಿ ಬಂದು, ಸುರೇಶ್‌ರನ್ನು ಹೊರಗೆ ಕರೆದು ಅವಾಚ್ಯ ಶಬ್ದಗಳಿಂದ ಬೈದು, ನೀನು ಕಳ್ಳತನ ಮಾಡುತ್ತೀಯ ಎಂದು ಹೇಳಿ ಮರದ ರೀಪಿನಿಂದ ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ.
ಇದರಿಂದ ತೀವ್ರವಾಗಿ ಗಾಯಗೊಂಡ ಸುರೇಶ್ ನ.26ರಂದು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.
Next Story





