ಕರ್ನಾಟಕದ ಶಾಸಕರ ನಿಯೋಗ ಕ್ಯಾಲಿಫೋರ್ನಿಯಾದ ಸ್ಟ್ಯಾನ್ ಫೋರ್ಡ್ ವಿವಿಗೆ ಭೇಟಿ

ಮಂಗಳೂರು, ಆ.3: ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ನಿಯೋಗವು, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಟ್ಯಾನ್ ಫೋರ್ಡ್ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿತು.
ನಿಯೋಗದಲ್ಲಿ ಶಾಸಕರಾದ ಮಂಜುನಾಥ್ ಭಂಡಾರಿ, ಪಿ.ಎಂ.ಅಶೋಕ್ ಪಟ್ಟಣ್, ದಿನೇಶ್ ಗೂಳಿ ಗೌಡ, ಶ್ರೀನಿವಾಸ್ ಮಾನೆ, ಗುರುರಾಜ್ ಗಂಟೆಹೊಳೆ, ಸುರೇಶ್ ಬಾಬು, ಅಶೋಕ್ ರೈ ಮತ್ತು ಗುರ್ಮೆ ಸುರೇಶ್ ಶೆಟ್ಟಿ ಅವರಿದ್ದರು.
ಸ್ಟ್ಯಾನ್ಫೋರ್ಡ್ ಸ್ಕೂಲ್ ಆಫ್ ಮೆಡಿಸಿನ್ ನ ಸಹಾಯಕ ಪ್ರಾಧ್ಯಾಪಕ ಮತ್ತು ಸ್ಟ್ಯಾನ್ ಫೋರ್ಡ್ ಬೈಯರ್ಸ್ ಸೆಂಟರ್ ಫಾರ್ ಬಯೋಡಿಸೈನ್ ನಲ್ಲಿ ಗ್ಲೋಬಲ್ ಔಟ್ರೀಚ್ ನ ನಿರ್ದೇಶಕ ಡಾ.ಅನುರಾಗ್ ಮೈರಾಲ್ ನೇತೃತ್ವದ ಬಯೋಡಿಸೈನ್ ಲ್ಯಾಬ್ಗೆ ಭೇಟಿ ನೀಡಿತು.
ಡಾ. ಮೈರಾಲ್ ಅವರು ಸೆಂಟರ್ ಫಾರ್ ಇನ್ನೋವೇಶನ್ ಇನ್ ಗ್ಲೋಬಲ್ ಹೆಲ್ತ್ನಲ್ಲಿ ಪ್ರಮುಖ ನಾಯಕತ್ವದ ಪಾತ್ರವನ್ನು ವಹಿಸುತ್ತಾರೆ. ಈ ಭೇಟಿ ಶಾಸಕರಿಗೆ, ಆರೋಗ್ಯ ರಕ್ಷಣೆ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿನ ಸಂಶೋಧನೆ ಮತ್ತು ಪ್ರಗತಿಯ ಬಗ್ಗೆ ಮಾಹಿತಿ ಒದಗಿಸಿತು.
Next Story





