ಅಲ್ ಬಯಾನ್ ಅರೇಬಿಕ್ ಕಾಲೇಜು ಕರ್ನಾಟಕದ ಧಾರ್ಮಿಕ ಶಿಕ್ಷಣದ ಆಶಾಕಿರಣ: ಶೇಖ್ ಫೈಝಲ್ ಮೌಲವಿ

ಮಂಗಳೂರು: ಕರ್ನಾಟಕ ಸಲಫಿ ಎಸೊಶಿಯೇಷನ್ ಮಂಗಳೂರು ಇದರ ಅಂಗ ಸಂಸ್ಥೆಯಾದ ಅಲ್ ಬಯಾನ್ ಅರೇಬಿಕ್ ಕಾಲೇಜು ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ಮತ್ತು ದಾವಾ ಸಮ್ಮೇಳನ ಕಾರ್ಯಕ್ರಮ ಇತ್ತೀಚೆಗೆ ದೇರಳಕಟ್ಟೆ ನಾಟೆಕಲ್ಲಿನ ಆಶ್ಕೋ ವಾಲಿಯ ಮೈದಾನದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ಜಾಮಿಅ ಅಲ್ ಹಿಂದ್ ನಿರ್ದೇಶಕರಾದ ಶೇಖ್ ಫೈಝಲ್ ಮೌಲವಿ ಮಾತನಾಡಿ, ಸಮಾಜದಲ್ಲಿ ಬೇರೂರಿರುವ ಅನಿಷ್ಟಗಳ ನಿರ್ಮೂಲನೆಗೆ ಜ್ಞಾನವೇ ಮೂಲಾಧಾರವಾಗಿದೆ. ಜ್ಞಾನಾರ್ಜನೆಗೆ ಅರೇಬಿಕ್ ಕಾಲೇಜುಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಅಲ್ ಬಯಾನ್ ಅರೇಬಿಕ್ ಕಾಲೇಜುಈ ನಿಟ್ಟಿನಲ್ಲಿ ಮುಂದೆ ಸಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶೇಖ್ ಫೈಝುಲ್ಲಾ ಮದನಿ, ಶೇಖ್ ಸಮೀರ್ ಮದನಿ, ಶೇಖ್ ಶಿಹಾಬ್ ಎಡಕ್ಕರ ಅವರು ಉಪನ್ಯಾಸ ನೀಡಿದರು.
ಅಲ್ ಬಯಾನ್ ಅರೇಬಿಕ್ ಕಾಲೇಜು ಬೆಳೆದು ಬಂದ ಹಾದಿ ಹಾಗೂ ಅದರ ಶೈಕ್ಷಣಿಕ ಸಾಧನೆಗಳ ಬಗ್ಗೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಮುಹಮ್ಮದ್ ಹಫೀಝ್ ಸ್ವಲಾಹಿ ವಿವರಿಸಿದರು.
ಕಾರ್ಯಕ್ರಮವನ್ನು ಕರ್ನಾಟಕ ಸಲಫಿ ಎಸೊಶಿಯೇಷನ್ ಪ್ರಧಾನ ಕಾರ್ಯದರ್ಶಿ ಯಾಸಿರ್ ಅಲ್ ಹಿಕಮಿ ಉದ್ಘಾಟಿಸಿದರು. ಮುಹಮ್ಮದ್ ಅಶ್ಫಾಕ್ ಉಳ್ಳಾಲ್ ಅವರು ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಮೌಲಾನ ಝಮೀರುಲ್ ಇಸ್ಲಾಮ್ ಮಕ್ಕಿ, ರಶೀದ್ ಇಂಜಿನಿಯರ್, ಸೈಯದ್ ಶಾಝ್, ಅಬ್ದುಲ್ಲಾ ಫರ್ಹಾನ್, ಅಬ್ದುಲ್ ಮನ್ನಾನ್, ಹಸೈನಾರ್ ಸ್ವಲಾಹಿ, ಅಬ್ದುನಾಸಿರ್ ದಮಾಮ್, ಅಬ್ದುಲ್ ಖಾದರ್ ಆರ್.ಬಿ., ಸಲೀಮ್ ಅಡ್ಯಾರ್, ಸಿರಾಜ್ ಸಜಿಪ, ಹಕೀಮ್ ಆರ್ಕುಳ, ಯು.ಟಿ.ಅಹ್ಮದ್ ಶರೀಫ್, ಅಹ್ಮದ್ ಎಸ್.ಎಂ. ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಅಲ್ ಬಯಾನ್ ವಿದ್ಯಾರ್ಥಿ ಅಬ್ದುಲ್ ಖಯ್ಯುಮ್ ಅವರು ಕುರಾನ್ ಪಠಿಸಿದರು. ಉನೈಸ್ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ವಿವಿಧ ವಿಷಯಗಳಲ್ಲಿ ಪ್ರತಿಭಾ ಪ್ರದರ್ಶನ ನಡೆಯಿತು. ಶುನೈಝ್ ಮತ್ತು ಇಜಾಝ್ ಸ್ವಲಾಹಿ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಅಬೂಬಕ್ಕರ್ ನಝೀರ್ ಸಲಫಿ ಧನ್ಯವಾದ ಅರ್ಪಿಸಿದರು.
ಆರಂಭದಲ್ಲಿ ಅಲ್ ಬಯಾನ್ ವಿದ್ಯಾರ್ಥಿ ಅಬ್ದುಲ್ ಖಯ್ಯುಮ್ ಕುರಾನ್ ಪಠಿಸಿದರು, ಉನೈಸ್ ಸ್ವಾಗತಿಸಿದರು, ಅಬೂಬಕ್ಕರ್ ನಝೀರ್ ಸಲಫಿ ಧನ್ಯವಾದಗೈದರು. ಶುನೈಝ್ ಮತ್ತು ಇಜಾಝ್ ಸ್ವಲಾಹಿ ಕಾರ್ಯಕ್ರಮ ನಿರ್ವಹಿಸಿದರು ಆರಂಭದಲ್ಲಿ ವಿವಿಧ ವಿಷಯಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು.







