ಕಾಶಿಪಟ್ಣ | ದಾರುನ್ನೂರ್ ನಲ್ಲಿ ಮಸೀದಿ ನಿರ್ಮಾಣದ ದಾನಿಯ ಪುತ್ರನಿಗೆ ಸನ್ಮಾನ

ದಾರುನ್ನೂರ್, ಜ.6: ಕಾಶಿಪಟ್ಣದ ದಾರುನ್ನೂರ್ ವಿದ್ಯಾ ಸಂಸ್ಥೆಯ ಆವರಣದಲ್ಲಿರುವ ಬಹರುನ್ನೂರ್ ಜುಮ್ಮಾ ಮಸೀದಿಯನ್ನು ನಿರ್ಮಿಸಿದ ದಾನಿ, UAE ಪ್ರಜೆ ಶೈಖ್ ಅಬ್ದುಲ್ ಬಾರಿ ಅವರ ಪುತ್ರ ಖಾಲಿದ್ ಅಲ್ ಝುಬೈರ್ ಬಿನ್ ಅಬ್ದುಲ್ ಬಾರಿ ಅವರನ್ನು ದಾರುನ್ನೂರ್ ಕೇಂದ್ರ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.
ಇತ್ತೀಚೆಗೆ ದಾರುನ್ನೂರ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ದಾರುನ್ನೂರ್ ಕೇಂದ್ರ ಸಮಿತಿಯ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ ಗೌರವ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ದಾರುನ್ನೂರ್ UAE ರಾಷ್ಟ್ರೀಯ ಸಮಿತಿಯ ನೇತಾರ ಶಂಶುದ್ದೀನ್ ಒಳಪಟ್ಟಣಂ, ದುಬೈ ಸಮಿತಿಯ ಅಧ್ಯಕ್ಷ ಶಂಶುದ್ದೀನ್ ಕಲ್ಕರ್ ಹಾಗೂ UAE ಕೋರ್ ಕಮಿಟಿ ಮುಖ್ಯಸ್ಥ ರಫೀಕ್ ಸುರತ್ಕಲ್ ಅವರನ್ನು ಸಹ ಗೌರವಿಸಲಾಯಿತು.
ದಾರುನ್ನೂರ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ, ಕೋಶಾಧಿಕಾರಿ ಡಿ.ಎ. ಉಸ್ಮಾನ್ (ಏರ್ ಇಂಡಿಯಾ), ಉಪಾಧ್ಯಕ್ಷರಾದ ಅಬ್ದುಲ್ ಸಮದ್ ಹಾಜಿ, ಪಿ.ಟಿ.ಏ. ಅಧ್ಯಕ್ಷ ಫಕೀರಬ್ಬ ಮಾಸ್ಟರ್, ಸದರ್ ಮುದರ್ರಿಸ್ ಹುಸೈನ್ ರಹ್ಮಾನಿ, ವ್ಯವಸ್ಥಾಪಕ ಅಬ್ದುಲ್ ಹಕೀಮ್, ಅರಬಿಕ್ ವಿಭಾಗದ ಮುಖ್ಯಸ್ಥ ರವೂಫ್ ಹುದವಿ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







