ಕಾವೂರು: ಕುಂಜತ್ತಬೈಲ್ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕಿ ನೇತ್ರಾವತಿಗೆ ಬೀಳ್ಕೊಡುಗೆ

ಕಾವೂರು: ದ.ಕ.ಜಿ.ಪಂ ಸ.ಮಾ.ಹಿ.ಪ್ರಾಥಮಿಕ ಶಾಲೆ ಮರಕಡ,ಕುಂಜತ್ತಬೈಲ್ ಇಲ್ಲಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎ.ನೇತ್ರಾವತಿ ಅವರಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ವತಿಯಿಂದ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮವು ಮಂಗಳವಾರ ಶಾಲಾ ಸಭಾಂಗಣದಲ್ಲಿ ಜರುಗಿತು.
ಮಂಗಳೂರು ಉತ್ತರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಜೇಮ್ಸ್ ಕುಟಿನ್ಹಾ, ಮ.ನ.ಪಾ ನಿಕಟಪೂರ್ವ ಸದಸ್ಯರಾದ ಶರತ್ ಕುಮಾರ್, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಸುರೇಶ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ನಾರಾಯಣ ಸಾಲಿಯಾನ್, ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್, ಶಿಕ್ಷಣ ಇಲಾಖೆಯ ಪ್ರಮುಖರು,ಸ್ತ್ರೀ ಜಾಗೃತಿ ಸಮಿತಿಯ ಶಂಶಾದ, ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿಯರಾದ ಶೋಭಾ ಸ್ವಾಗತಿಸಿದರು, ಪ್ರೇಮಲತಾ ಅಭಿನಂದನಾ ಪತ್ರ ವಾಚಿಸಿದರು, ಮರೀನಾ ಕಾರ್ಯಕ್ರಮ ನಿರೂಪಿಸಿ, ನಾಗಮಣಿ ಧನ್ಯವಾದಗೈದರು.





