ಕಿಕ್ ಬಾಕ್ಸಿಂಗ್: ಅದ್ವಯ್ ಪೂಜಾರಿ ಚಾಂಪಿಯನ್

ಮಂಗಳೂರು, ಜು.30; ಬೆಂಗಳೂರಿನಲ್ಲಿ ಇತ್ತೀಚೆಗೆ ಗೋಲ್ಡನ್ ಮೋಂಗ್ಖಾನ್ ಅಮೆಚೂರು ನ್ಯಾಷನಲ್ ಮೊಯಿತೈ ಚಾಂಪಿಯನ್‌ಶಿಪ್ ವತಿಯಿಂದ ನಡೆದ ಮೊಯಿತೈ ಕಿಕ್ ಬಾಕ್ಸಿಂಗ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಂಗಳೂರಿನ ಗ್ರೌಂಡ್ ಬಾರ್ನ್ ಫೈಟ್ ಕ್ಲಬ್ ಆ್ಯಂಡ್ ಫಿಟ್‌ನೆಸ್ ಜಿಮ್‌ನ 14ವರ್ಷ ವಯಸ್ಸಿನ ಅದ್ವಯ್ ಪೂಜಾರಿ 54 ಕೆಜಿ ವಿಭಾಗದಲ್ಲಿ ತನ್ನ ಎದುರಾಳಿಯನ್ನು ಟೆಕ್ನಿಕಲ್ ನಾಕೌಟ್‌ನಿಂದ ಸೋಲಿಸಿ ಚಿನ್ನದ ಪದಕ ಹಾಗೂ ನ್ಯಾಷನಲ್ ಮೊಯಿತೈ ಚಾಂಪಿಯನ್‌ಶಿಪ್ ಗಳಿಸಿ ಅತೀ ಕಿರಿಯ ವಯಸ್ಸಿನ ಅಜೇಯ ಫೈಟರ್ ಆಗಿ ಇತಿಹಾಸ ನಿರ್ಮಿಸಿರುತ್ತಾರೆ.
ಇದು ಇವರ ಮೂರನೇ ರಾಷ್ಟ್ರೀಯ ಪ್ರಶಸ್ತಿಯಾಗಿರುತ್ತದೆ. ಇವರಿಗೆ ಜಿಮ್‌ನ ತರಬೇತುದಾರ ರೋಶನ್ ಹಾಗೂ ಮುಖ್ಯ ತರಬೇತುದಾರ ಶಿಶಿರ್ ಪೂಜಾರಿ ತರಬೇತಿ ನೀಡಿರುತ್ತಾರೆ.
Next Story





