ಕೊಳತ್ತಮಜಲು ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ನ್ಯಾಯಕ್ಕಾಗಿ ಮುಖ್ಯಮಂತ್ರಿಯನ್ನು ಭೇಟಿಯಾದ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ

ಬೆಂಗಳೂರು : ಕೊಳತ್ತಮಜಲ್ ಮಸೀದಿಯ ಪ್ರಧಾನ ಕಾರ್ಯದರ್ಶಿ,ಎಸ್ಕೆಎಸ್ಸೆಸ್ಸೆಫ್ ನ ಸಕ್ರೀಯ ಕಾರ್ಯಕರ್ತ ಅಬ್ದುಲ್ ರಹಿಮಾನ್ ರವರ ಕೊಲೆಗೆ ನ್ಯಾಯ ದೊರಕಿಸುವಂತೆ ಹಾಗೂ ದ್ವೇಷ ಭಾಷಣಕಾರನ್ನು ಕೂಡಲೇ ಬಂಧಿಸುವಂತೆ ಅಗ್ರಹಿಸಿ ಹಾಗೂ ಪ್ರಮುಖ 8 ಬೇಡಿಕೆಯೊಂದಿಗೆ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ನಿಯೋಗದಲ್ಲಿ ಎಸ್ಕೆಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಯ್ಯದ್ ಅಮೀರ್ ತಂಙಳ್ ಕಿನ್ಯ ಕಾರ್ಯದರ್ಶಿ ಅರೀಫ್ ಕಮ್ಮಾಜೆ, ಜಿಲ್ಲಾ ವಿಖಾಯ ಚೈರ್ಮೆನ್ ಇಬ್ರಾಹಿಂ ಕುಕ್ಕಟ್ಟೆ, ಜಿಲ್ಲಾ ವಿಖಾಯ ಉಸ್ತುವಾರಿ ಮುಸ್ತಫಾ ಕಟ್ಟದಪಡ್ಪು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಿಸಾರ್ ಬೆಂಗ್ರೆ, ಜಿಲ್ಲಾ ಉಪಾಧ್ಯಕ್ಷ ಆಸೀಫ್ ಅಬ್ದುಲ್ಲಾ, ಅಬ್ಬಾಸ್ ನಾಡಜೆ ಮೊದಲಾದವರು ಉಪಸ್ಥಿತರಿದ್ದರು.
Next Story