ಕೊಳ್ತಮಜಲು: ಮೃತ ಅಬ್ದುಲ್ ರಹ್ಮಾನ್ ಮನೆಗೆ ಸುನ್ನಿ ಕೋ ಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ನಾಯಕರ ಭೇಟಿ
50 ಸಾವಿರ ರೂ. ಧನ ಸಹಾಯ

ಮಂಗಳೂರು : ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್ ರಹ್ಮಾನ್ ಅವರ ಮನೆಗೆ ಸುನ್ನಿ ಕೋ ಆರ್ಡಿನೇಷನ್ ಬೆಳ್ತಂಗಡಿ ತಾಲೂಕು ಸಮಿತಿ ನಾಯಕರು ಭೇಟಿ ನೀಡಿ ದುಆ ಮಜ್ಲಿಸ್ ನಡೆಸಿದರು.
ಈ ವೇಳೆ ಸಮಿತಿಯ ವತಿಯಿಂದ 50 ಸಾವಿರ ರೂ. ಚೆಕ್ ಹಾಗೂ ರೇಷನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ನಿರ್ದೇಶಕ ರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಸಲಾಂ ತಂಙಳ್ ಪೂಂಜಲ್ ಕಟ್ಟೆ ,
ಅಧ್ಯಕ್ಷರಾದ ಅಸ್ಸಯ್ಯಿದ್ ಅಬ್ದುಲ್ ರಹ್ಮಾನ್ ಸಾದಾತ್ ತಂಙಳ್ ಉಳ್ತೂರು, ಕಾರ್ಯಾಧ್ಯಕ್ಷರಾದ ಉಮರ್ ಜಿ ಕೆ ಗುರುವಾಯನಕೆರೆ, ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ, ಕೋಶಾಧಿಕಾರಿ ಮುಹಮ್ಮದ್ ರಫಿ ಬೆಳ್ತಂಗಡಿ, ಉಪಾಧ್ಯಕ್ಷರಾದ ಅಸ್ಸಯ್ಯಿದ್ ಎಸ್ ಎಮ್ ಕೋಯ ತಂಙಳ್ ಉಜಿರೆ, ಅಬ್ದುರ್ರಝಾಖ್ ಸಖಾಫಿ ಮಡಂತ್ಯಾರು. ಕಾರ್ಯದರ್ಶಿಗಳಾದ ಉಮರ್ ಕುಂಞಿ ನಾಡ್ಜೆ,ಅಬ್ದುಲ್ ರಹ್ಮಾನ್ ಸಖಾಫಿ ಆಲಂದಿಲ ಹಾಗೂ ಸದಸ್ಯರುಗಳಾದ GM ಕುಂಞ ಜೋಗಿಬೆಟ್ಟು, ಅಬ್ಬೋನು ಮದ್ದಡ್ಕ, ಉಮರ್ ಮಾಸ್ಟರ್, ಆದಂ ಅಲ್ ಮದೀನ , ಅಬ್ಬಾಸ್ ಬಟ್ಲಡ್ಕ, ಯಾಕೂಬ್ ಮಾಪಲ, ಅಬ್ಬಾಸ್ ಕುಪ್ಪೆಟ್ಟಿ, ನಾಸಿರ್ ಪಡ್ಡದಂಡ್ಕ ಉಪಸ್ಥಿತರಿದ್ದರು.









