ಕೊಣಾಜೆ | ಶಿಕ್ಷಣ ಮಾತ್ರ ಸ್ವಾಭಿಮಾನದ ಬದುಕು ಕಟ್ಟಿಕೊಡುತ್ತದೆ: ಯು.ಟಿ.ಖಾದರ್

ಕೊಣಾಜೆ : ಶೈಕ್ಷಣಿಕ ಕ್ಷೇತ್ರ ಮಾತ್ರ ನಮಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಡಬಲ್ಲುದು ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಪಾಲಕರ ಜವಬ್ಧಾರಿಯು ತಮ್ಮ ಮಕ್ಕಳನ್ನು ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತದೆ. ಮಕ್ಕಳಿಗಾಗಿ ಅಮೂಲ್ಯ ಸಮಯ ಮೀಸಲಿಡಿ ಎಂದು ವಿಧಾನಸಭಾ ಅಧ್ಯಕ್ಷರಾದ ಯು.ಟಿ.ಖಾದರ್ ಅವರು ಹೇಳಿದರು.
ನಡುಪದವಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮೂಲೆ ಇಸ್ಮಾಯಿಲ್ ಹಾಜಿ ಸ್ಮಾರಕ ವಾಚನಾಲಯ ಹಾಗೂ ಭೋಜನಾಲಯ ಉದ್ಘಾಟನೆ ಹಾಗೂ ವಾರ್ಷಿಕೋತ್ಸವದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಡುಪದವಿನಲ್ಲಿ ಆರಂಭಗೊಂಡಿರುವ ಶಾಲೆಯು ಹಂತಹಂತವಾಗಿ ಮೇಲ್ದರ್ಜೆಗೇರಿ ಇಂದು ಮಾದರಿ ಶಾಲೆಯಾಗಿ ರೂಪುಗೊಂಡಿದ್ದು, ಇದರಿಂದಾಗಿ ಈ ಊರಿನ ಮಕ್ಕಳಿಗೆ ಅನುಕೂಲವಾಗಿದೆ ಜೊತೆಗೆ ಗ್ರಾಮದ ಅಭಿವೃದ್ಧಿಯಲ್ಲೂ ಕೊಡುಗೆಯಾಗಲಿದೆ ಎಂದರು.
ಶಾಲಾಡಳಿತ ಮಂಡಳಿಯ ಅಧ್ಯಕ್ಷರಾದ ಸಿ.ಎಂ.ಶರೀಫ್ ಪಟ್ಟೋರಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖಂಡರಾದ ಇಬ್ರಾಹಿಂ ಹಾಜಿ, ಅಬ್ದುಲ್ ನಾಸೀರ್ ಕೆ.ಕೆ., ನಝರ್ ಷಾ ಪಟ್ಟೋರಿ, ಪುತ್ತು ಹಾಜಿ, ಪುರುಷೋತ್ತಮ, ಉಮ್ಮರ್ ಹಾಜಿ, ರಿಯಾಝ್, ಇಕ್ಬಾಲ್ ಬಾಳಿಲ, ಜಾವೇದ್, ಅಬ್ಬು ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಪ್ರೇಮ ಅವರು ಬಹುಮಾನಿತರ ಹೆಸರು ವಾಚಿಸಿದರು.
ಶೈಕ್ಷಣಿಕ ಸಾಧನೆಗೈದ ಹಳೆ ವಿದ್ಯಾರ್ಥಿನಿ ಫೌಮ್ಯ ಅಬೂಬಕ್ಕರ್ ಅಭಿನಂದಿಸಲಾಯಿತು. ಇದೇ ಸಂದರ್ಭದಲ್ಲಿ ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ., ವರ್ಗಾವಣೆಗೊಂಡ ಶಿಕ್ಷಕರಾದ ಶಿವರಾಮ ದಾಸ ಬಿ., ನಿವೃತ್ತ ಶಿಕ್ಷಕಿ ನಾಗ ಪ್ರಭ, ಎವ್ಜಿತಾ ಡಿಸೋಜ, ನಿವೃತ್ತ ಅಕ್ಷರ ದಾಸೋಹ ಸಿಬ್ಬಂದಿ ಖತಿಜಮ್ಮ ಅವರನ್ನು ಸನ್ಮಾನಿಸಲಾಯಿತು.
ಮುಖಂಡರಾದ ಎನ್.ಎಸ್.ನಾಸೀರ್ ನಡುಪದವು ಅವರು ಸ್ವಾಗತಿಸಿದರು.







