ಕೊಟ್ಟಾರ ಚೌಕಿ: ಬಸ್ಸಿಗೆ ಕಲ್ಲೆಸೆದು ಹಾನಿ

ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ಬಸ್ಸೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ನಗರದ ಸ್ಟೇಟ್‌ಬ್ಯಾಂಕ್‌ನಿಂದ ಮಣಿಪಾಲ್ ಕಡೆಗೆ ಹೊರಟಿದ್ದ ಬಸ್ ಲಾಲ್‌ಭಾಗ್ ತಲುಪಿದಾಗ ಬೈಕ್‌ನಲ್ಲಿ ಬಂದ ಮೂವರು ಬಸ್‌ಗೆ ಅಡ್ಡವಾಗಿ ಬೈಕ್‌ನ್ನು ಇಟ್ಟು ಬಸ್ ಚಾಲಕ ಶೈಲೇಶ್‌ಗೆ ಅವಾಚ್ಯವಾಗಿ ಬೈದರೆ, ಒಬ್ಬಾತ ಚಾಲಕನಿಗೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ.
ಬಳಿಕ ಆರೋಪಿ ಬೈಕ್ ಸವಾರರು ಅಲ್ಲಿಂದ ತೆರಳಿದ್ದರೂ ಬಸ್ ಕೊಟ್ಟಾರ ಚೌಕಿ ತಲುಪಿದಾಗ ಮತ್ತೆ ಬಸ್‌ಗೆ ಬೈಕ್ ಅಡ್ಡ ನಿಲ್ಲಿಸಿ ಬಸ್‌ನ ಗಾಜಿಗೆ ಕಲ್ಲೆಸೆದು ಪುಡಿ ಮಾಡಿ ಸುಮಾರು 30000 ರೂ. ನಷ್ಟವನ್ನುಂಟು ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





