ಕೃಷ್ಣಾಪುರ: ಉದ್ಯಮಿ, ಸಮಾಜ ಸೇವಕ ಹಾಜಿ ಬಿಎಂ ಹುಸೈನ್ (ಉತ್ತ ಹಾಜಿ) ನಿಧನ
ಮಂಗಳೂರು: ಉದ್ಯಮಿ, ಸಮಾಜ ಸೇವಕ ಹಾಜಿ ಬಿಎಂ ಹುಸೈನ್ (ಉತ್ತ ಹಾಜಿ) ಮಂಗಳವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 75 ವರ್ಷ ಪ್ರಾಯವಾಗಿತ್ತು.
ಕೃಷ್ಣಾಪುರ ನಿವಾಸಿಯಾಗಿರುವ ಇವರು ಬದ್ರಿಯಾ ಜುಮಾ ಮಸ್ಜಿದ್ (ಮುಸ್ಲಿಂ ಜಮಾಅತ್) ನ ಮಾಜಿ ಅಧ್ಯಕ್ಷ, ಅಲ್ ಬದ್ರಿಯಾ ವಿದ್ಯಾ ಸಂಸ್ಥೆಯ ಸ್ಥಾಪಕ ಅಧ್ಯಕ್ಷ, ಕಾಟಿಪಳ್ಳ ಚೈತನ್ಯ ಪಬ್ಲಿಕ್ ಸ್ಕೂಲ್ ನ ಗೌರವಾಧ್ಯಕ್ಷ, ಬದ್ರಿಯಾ ಅಸೋಸಿಯೇಷನ್ ಇದರ ಸ್ಥಾಪಕ ಅಧ್ಯಕ್ಷರಾಗಿದ್ದು, ಸಾಮಾಜಿಕ, ಧಾರ್ಮಿಕ ರಂಗದ ಸೇವೆಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು.
ಮೃತದೇಹವನ್ನು ಕೃಷ್ಣಾಪುರ ಲಂಡನ್ ಪಾರ್ಕ್ ಬಳಿಯ ಅವರ ಸ್ವಗೃಹದಲ್ಲಿ ಸಂಬಂಧಿಕರ ಸಂದರ್ಶನಕ್ಕೆ ಇರಿಸಲಾಗಿದ್ದು, ಮಂಗಳವಾರ (ಇಂದು) ಸಂಜೆ ಕೃಷ್ಣಾಪುರ ಈದ್ಗಾ ಮೈದಾನದಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ, ಒಬ್ಬ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story