ಕೃಷ್ಣಾಪುರ: ಗಾಂಧಿ ಜಯಂತಿ ಪ್ರಯುಕ್ತ ಸ್ವಚ್ಛತಾ ಅಭಿಯಾನ

ಮಂಗಳೂರು: ಹಿರಾ ಪಬ್ಲಿಕ್ ಸ್ಕೂಲ್ ಕೃಷ್ಣಾಪುರ ಇದರ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಸ್ವಚ್ಛತಾ ಅಭಿಯಾನವು ಸೋಮವಾರ ನಡೆಯಿತು.
ಸಹ ಶಿಕ್ಷಕಿ ತಬಸ್ಸುಮ್ ಗಾಂಧೀಜಿಯ ಸರಳ ಜೀವನ ಮತ್ತು ಮೌಲ್ಯಗಳ ಬಗ್ಗೆ ಮಾತನಾಡಿದರು. ಸಹ ಶಿಕ್ಷಕಿ ಫರ್ಝಾನ ಸ್ವಚ್ಛತೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಭವ್ಯಾ ಅಧ್ಯಕ್ಷತೆ ವಹಿಸಿದ್ದರು.
ಮಕ್ಕಳು ಶಾಲಾ ವಠಾರ ಹಾಗೂ ಆಸುಪಾಸಿನ ಬೀದಿಗಳಲ್ಲಿ ಕಸವನ್ನು ಹೆಕ್ಕುತ್ತಾ, ಸ್ವಚ್ಛತಾ ಕುರಿತಾಗಿ ಘೋಷಣೆ ಕೂಗುತ್ತಾ ಸಾಗಿ ಗಮನ ಸೆಳೆದರು. ಸಹ ಶಿಕ್ಷಕಿ ಅಶ್ವಿನಿ ಸ್ವಾಗತಿಸಿದರು. ಸಹ ಶಿಕ್ಷಕಿ ಶಿಲ್ಪಾಶೆಟ್ಟಿ ವಂದಿಸಿದರು. ಶೈನಿ ಕಾರ್ಯಕ್ರಮ ನಿರೂಪಿಸಿದರು.
Next Story





