ದೇರಳಕಟ್ಟೆ: ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ನ.23ರಿಂದ ಅಂತಾರಾಷ್ಟ್ರೀಯ ಸಮ್ಮೇಳನ
ಮಂಗಳೂರು, ನ.20: ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯ, ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ವತಿಯಿಂದ ನ.23ರಿಂದ 25ರವರೆಗೆ ದೇರಳಕಟ್ಟೆಯ ಎ.ಬಿ. ಶೆಟ್ಟಿ ಸ್ಮಾರಕ ದಂತ ವಿಜ್ಞಾನಗಳ ಸಂಸ್ಥೆಯ ಆವಿಷ್ಕಾರ್ ಸಭಾಂಗಣದಲ್ಲಿ ‘ವಿಕಿರಣದ ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ರೇಡಿಯೊಬಯಾಲಾಜಿಕಲ್ ಅಧ್ಯಯನಗಳ ಪ್ರಸ್ತುತತೆ’ ಎಂಬ ವಿಷಯದ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
ಇಂಡಿಯನ್ ಸೊಸೈಟಿ ಫಾರ್ ರೇಡಿಯೇಶನ್ ಬಯಾಲಜಿ ಆಶ್ರಯದಲ್ಲಿ ನಡೆಯಲಿರುವ ಸಮ್ಮೇಳನ ನ.24ರಂದು ಬೆಳಗ್ಗೆ 9ಕ್ಕೆ ಉದ್ಘಾಟನೆಗೊಳ್ಳಲಿದೆ. ನಿಟ್ಟೆ ಪರಿಗಣಿಸಲ್ಪಟ್ಟ ವಿವಿ ಕುಲಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಡಿಐಬಿಇಆರ್ ಮಾಜಿ ನಿರ್ದೇಶಕರಾದ ಡಾ. ಮಧುಬಾಲಾ, ನಿಟ್ಟೆ ವಿವಿ ಪ್ರೊ ಛಾನ್ಸಲರ್‌ಗಳಾದ ಡಾ. ಶಾಂತಾರಾಮ ಶೆಟ್ಟಿ, ವಿಶಾಲ್ ಹೆಗ್ಡೆ, ವೈಸ್ ಛಾನ್ಸಲರ್ ಡಾ.ಎಂ.ಎಸ್. ಮೂಡಿತ್ತಾಯ, ಐಎಸ್‌ಆರ್ ಮತ್ತು ಸಿಆರ್‌ಎಲ್ ವಿಭಾಗದ ಉಪಾಧ್ಯಕ್ಷ ಡಾ. ಸತೀಶ್‌ಕುಮಾರ್ ಭಂಡಾರಿ ಅತಿಥಿಯಾಗಿ ಭಾಗವಹಿಸುವರು ಎಂದು ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ವೈಸ್ ಡೀನ್ ಡಾ. ಜಯಪ್ರಕಾಶ್ ಶೆಟ್ಟಿ ಕೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮ್ಮೇಳನದ ವೈಜ್ಞಾನಿಕ ಕಾರ್ಯಕ್ರಮವು ವಿಕಿರಣ ವಿಜ್ಞಾನಕ್ಕೆ ಸಂಬಂಧಿಸಿದಂತೆ ಜೀವಶಾಸ್ತ್ರ, ಔಷಧ, ರಸಾಯನಶಾಸ್ತ್ರ, ಭೌತಶಾಸ್ತ್ರದಂತಹ ಪ್ರಮುಖ ವಿಭಾಗಗಳನ್ನು ಒಳಗೊಳ್ಳುತ್ತದೆ. ಉಪನ್ಯಾಸ, ಪ್ರಬಂಧ ಮಂಡನೆ, ಪೋಸ್ಟರ್ ಪ್ರಸ್ತುತಿಗಳನ್ನು ಹೆಸರಾಂತ ರೇಡಿಯೊಬಯಾಲಜಿಸ್ಟ್‌ಗಳು ಮತ್ತು ವಿಶ್ವಾದ್ಯಂತದ ಯುವ ಸಂಶೋಧಕರು ನಡೆಸಿಕೊಡಲಿದ್ದಾರೆ. ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ವಿಕಿರಣ ಸುರಕ್ಷತೆಯು ಪ್ರಮುಖ ಪಾತ್ರ ವಹಿಸುವುದರಿಂದ ವಿಕಿರಣದ ಮೂಲಕ ಪರಿಣಾಮಕಾರಿ ನಿರ್ವಹಣೆಯು ಉತ್ತಮ ವೈದ್ಯಕೀಯ ಅಭ್ಯಾಸದ ಮುಖ್ಯ ಅಂಶಗಳಲ್ಲಿ ಒಂದಾಗಿದೆ. ಈ ವಿಷಯಗಳನ್ನು ಪ್ರಸಿದ್ಧ ವಿಕಿರಣ ವಿಜ್ಞಾನಿಗಳು ಮತ್ತು ಸಂಶೋಧಕರು ಸಮ್ಮೇಳನದಲ್ಲಿ ತಿಳಿಸಲಿದ್ದಾರೆ. ನ.23ರಂದು ವಿವಿಧ ವಿಭಾಗಗಳ ವತಿಯಿಂದ ಸಮ್ಮೇಳನ ಪೂರ್ವಭಾವಿ ವಿಚಾರ ಸಂಕಿರಣ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಿಟ್ಟೆ ವಿವಿ ಐಎಸ್‌ಆರ್ ಮತ್ತು ಸಿಆರ್‌ಎಲ್ ವಿಭಾಗದ ಉಪಾಧ್ಯಕ್ಷ ಡಾ. ಸತೀಶ್‌ಕುಮಾರ್ ಭಂಡಾರಿ, ವಿವಿಧ ವಿಭಾಗಗಳ ಪ್ರತಿನಿಗಳಾದ ಡಾ. ರಾಮಚಂದ್ರ ಗೌಡ ಕೆ.ಎಂ., ಡಾ. ವಾಗೀಶ ಭಟ್, ಪ್ರೊಘಿ.ಸುಚೇತಾ ಕುಮಾರಿ, ಡಾ. ಸಚ್ಚಿದಾನಂದ ಅಡಿಗ, ಪ್ರೊಘಿ. ಕೃಷ್ಣ ಶರಣ್, ಶಶಿಕಿರಣ್ ಶೆಟ್ಟಿ ಉಪಸ್ಥಿತರಿದ್ದರು.







