ಕುದ್ರೋಳಿ: ಬ್ರೈಟ್ ಶಾಲೆಯಲ್ಲಿ ಅರಬಿ ಭಾಷಾ ದಿನಾಚರಣೆ

ಮಂಗಳೂರು: ಕುದ್ರೋಳಿಯ ಬ್ರೈಟ್ ಮೋಡೆಲ್ ಶಾಲೆಯಲ್ಲಿ ಅರಬಿ ಭಾಷಾ ದಿನವನ್ನು ಗುರುವಾರ ಆಚರಿಸಲಾಯಿತು.
ಶಾಲಾಧ್ಯಕ್ಷ ಜಾವೇದ್ ಕುದ್ರೋಳಿ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಪ್ರಾಂಶುಪಾಲೆ ಕವಿತಾ ಜಲೇಂದ್ರ ಶುಭಕೋರಿದರು. ಅಬ್ದುಲ್ ಲತೀಫ್ ಆಲಿಯಾ ಅರಬಿ ಭಾಷೆಯ ಮಹತ್ವ, ಅದರ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳ ಕುರಿತು ಮಾತನಾಡಿದರು. ಅದನ್ನು ವಿದ್ಯಾರ್ಥಿ ರಿಫಾಝ್ ಅನುವಾದಿಸಿದರು.
ಫರ್ಹಾನ್, ಮುಹಮ್ಮದ್ ಅರ್ಶ್, ಇಮಾದ್, ನಬಾ, ಖಲೀಲ್, ಹೈಫಾ, ರಝೀನ್ ಮತ್ತಿತರ ವಿದ್ಯಾರ್ಥಿಗಳಿಂದ ಅರಬಿ ಭಾಷಣ, ಅರಬಿ ಸುದ್ದಿ ವಾಚನ ಹಾಗೂ ಅರಬಿ ಹಾಡುಗಳ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಾದ ಲಿಫಾಮ್ ಹಾಗೂ ಮಾಹಿರ್ ಅರಬಿಯಲ್ಲಿ ಕಾರ್ಯಕ್ರಮ ನಿರೂಪಿಸಿದರು.
Next Story





