ಗೋಪಿನಾಥ್ ಭಟ್ಟರಿಗೆ ಕುಂದೇಶ್ವರ ಕಲಾಭೂಷಣ ಪ್ರಶಸ್ತಿ

ಮಂಗಳೂರು, ಸೆ.1: ತುಳು, ಕೊಂಕಣಿ, ಕನ್ನಡ, ತೆಲುಗು ಸಿನಿಮಾ-ರಂಗಭೂಮಿಯ ಕಲಾವಿದ ಗೋಪಿನಾಥ್ ಭಟ್‌ಗೆ ಕುಂದೇಶ್ವರ ಪ್ರತಿಷ್ಠಾನದ ಕುಂದೇಶ್ವರ ಕಲಾಭೂಷಣ ಪ್ರಶಸ್ತಿಯನ್ನು ಸೆ.4ರಂದು ಸಂಜೆ 6ಕ್ಕೆ ನಗರದ ಪುರಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು. ಈ ವೇಳೆ ಶ್ರೀಪ್ರಾಪ್ತಿ ಕಲಾವಿದೆರ್ ಕುಡ್ಲ ತಂಡದಿಂದ ಪ್ರಶಾಂತ್ ಸಿ.ಕೆ. ವಿರಚಿತ ‘ಮಣೆ ಮಂಚೊದ ಮಂತ್ರ ಮೂರ್ತಿ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಕುಂದೇಶ್ವರ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಜಿತೇಂದ್ರ ಕುಂದೇಶ್ವರ ತಿಳಿಸಿದ್ದಾರೆ.
ಗೋಪಿನಾಥ್ ಭಟ್ ರಂಗಭೂಮಿಯಲ್ಲಿ 100ಕ್ಕೂ ಹೆಚು ಪಾತ್ರ ನಿರ್ವಹಿಸಿ 750ಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ವೀರಮದಕರಿ ಸಹಿತ 45ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಟ್ಸ್ ಆಲ್ ಯುವರ್ ಆನರ್ ನಾಟಕಕ್ಕೆ ರಾಜ್ಯಮಟ್ಟದ ಪ್ರಶಸ್ತಿ ಗೆದ್ದುಕೊಂಡಿರುವ ಭಟ್ ಕೊಂಕಣಿ ಅಕಾಡಮಿಯ ಗೌರವ ಪ್ರಶಸ್ತಿಗೂ ಭಾಜನರಾಗಿದ್ದಾರೆ.
Next Story





