2026 ಜ.4 ರಿಂದ ಕುಂಡೂರು ಉರೂಸ್

ಉಳ್ಳಾಲ: ಕುಂಡೂರು ಜುಮಾ ಮಸೀದಿಯಲ್ಲಿ ಅಂತ್ಯ ವಿಶ್ರಮಿಸುತ್ತಿರುವ ಹಝ್ರತ್ ಅಸ್ಸಯ್ಯದ್ ಮುಹಮ್ಮದ್ ರಿಫಾಯಿ ಅಲ್-ಬುಖಾರಿ (ಖ.ಸಿ.) ರವರ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುವ ಕುಂಡೂರು ಮುಖಾಂ ಉರೂಸ್ ಕಾರ್ಯಕ್ರಮವು 2026 ಜನವರಿ 4 ರಿಂದ 11 ರವರೆಗೆ ನಡೆಯಲಿದೆ ಎಂದು ಕುಂಡೂರು ಜಮಾಅತ್ ಕಮಿಟಿ ಅಧ್ಯಕ್ಷ ಸ್ವಾಗತ್ ಅಬೂಬಕ್ಕರ್ ತಿಳಿಸಿದ್ದಾರೆ .
ತೊಕ್ಕೊಟ್ಟು ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡಿ, ಎಂಟು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಪ್ರತಿ ದಿನ ರಾತ್ರಿ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಕೇರಳ ಹಾಗೂ ಕರ್ನಾಟಕದ ಪ್ರಸಿದ್ದ ವಾಗ್ಮಿ ಗಳು , ರಾಜಕೀಯ ಮತ್ತು ಸಾಮಾಜಿಕ ಮುಖಂಡರು ಈ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕುಂಡೂರು ಮಸೀದಿ ಖತೀಬು ಅಶ್ರಫ್ ಫೈಝಿ ಅರ್ಕನಾ , ಕೋಶಾಧಿಕಾರಿ ಸಲೀಮ್ ಅಲಿ , ಪ್ರಧಾನ ಕಾರ್ಯದರ್ಶಿ ಇರ್ಷಾದ್ ಮಜಲ್ ತೋಟ ,ಲೆಕ್ಕಪರಿಶೋಧಕ ರಶೀದ್ ಕುಂಡೂರು ಉಪಸ್ಥಿತರಿದ್ದರು.
Next Story





