ಮೊಂಟೆಪದವು ಗುಡ್ಡ ಕುಸಿತ ಘಟನೆಯಲ್ಲಿ ಮೃತಪಟ್ಟ ಅಜ್ಜಿ, ಮೊಮ್ಮಕ್ಕಳ ಅಂತ್ಯ ಸಂಸ್ಕಾರ

ದೇರಳಕಟ್ಟೆ: ಮಂಜನಾಡಿ ಗ್ರಾಮದ ಮೊಂಟೆಪದವು ಹಿತ್ತಿಲುಕೋಡಿ ಕೊಪ್ಪಲದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಂಭವಿಸಿದ ದುರಂತದಲ್ಲಿ ಮೃತಪಟ್ಟ ಅಜ್ಜಿ, ಮೊಮ್ಮಕ್ಕಳ ಅಂತ್ಯ ಸಂಸ್ಕಾರ ಶನಿವಾರ ನಡೆಯಿತು.
ದುರಂತದಲ್ಲಿ ಸಾವನ್ನಪ್ಪಿದ ಅಜ್ಜಿ ಪ್ರೇಮಾ ಮತ್ತು ಅವರ ಮೊಮ್ಮಕ್ಕಳಾದ ಆರ್ಯನ್, ಆರುಷ್ ಅವರ ಅಂತಿಮ ಸಂಸ್ಕಾರ ಇಂದು ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು, ಬಂಧು ಮಿತ್ರರು ಪಾಲ್ಗೊಂಡಿದ್ದರು. ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ಕಾಂತಪ್ಪ ಪೂಜಾರಿ ಹಾಗೂ ಸೀತಾರಾಮ ಅವರ ಪತ್ನಿ ಅಶ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Next Story





