‘‘ಹಸಿರೇ ಉಸಿರು-ಹಿತ್ತಲಗಿಡ ಮದ್ದು’’ ಯೋಜನೆಗೆ ಚಾಲನೆ

ಮಂಗಳೂರು, ಜು.23: ರೋಟರಿ ಕ್ಲಬ್ ಬೈಕಂಪಾಡಿ ಇದರ ‘‘ಹಸಿರೇ ಉಸಿರು-ಹಿತ್ತಲಗಿಡ ಮದ್ದು’’ ಯೋಜನೆಯನ್ನು ಮೂಡಬಿದಿರೆ ಆಳ್ವಾಸ್ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ ಆಳ್ವರ ನಿವಾಸದಲ್ಲಿ ಉದ್ಘಾಟಿಸಲಾಯಿತು.
ನಂತರ ರೋಟರಿ ಕ್ಲಬ್ ಬೈಕಂಪಾಡಿಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಕ್ಷ ಸುಧಾಕರ ಎನ್ ಸಾಲ್ಯಾನ್, ಅಸಿಸ್ಟೆಂಟ್ ಗವರ್ನರ್ ಸುಬೋಧ ಕುಮಾರ್ ದಾಸ್, ಯೋಜನೆಯ ನಿರ್ದೇಶಕರಾದ ಬಿ ಬಿ ರೈ, ರಮೇಶ ಆಚಾರಿ ಸಹಿತ ಸದಸ್ಯರು ಭಾಗವಹಿಸಿದ್ದರು.
Next Story





