ಮಿಷನ್ ಇಂದ್ರಧನುಷ್ ಗೆ ಚಾಲನೆ: ದ.ಕ ಜಿಲ್ಲೆಯಲ್ಲಿ 5103 ಮಕ್ಕಳಿಗೆ ಲಸಿಕೆ ನೀಡುವ ಗುರಿ

ಮಂಗಳೂರು: ನವಜಾತ ಮಗುವಿನ ನಿಂದ (0-23 )23ತಿಂಗಳ ಮಕ್ಕಳಿಗೆ ಒಟ್ಟು5103 ಮಕ್ಕಳಿಗೆ , ನಿಯಮಿತ ಅವಧಿಯಲ್ಲಿ ನೀಡಬೇಕಾದ ರೋಗನಿರೋಧಕ ಲಸಿಕೆಗಳು, 2-5 ವರ್ಷದೊಳಗಿನ ಮಕ್ಕಳಿಗೆ ಎಂಆರ್-1, ಎಂಆರ್-2, ಫೆಂಟಾ ಮತ್ತು ಓಪಿವಿ ಲಸಿಕಾ ಡೋಸ್‍ಗಳು ಹಾಗೂ ರೋಗ ನಿರೋಧಕ ಹಾಗೂ ಸುರಕ್ಷಿತ ಲಸಿಕೆ ಪಡೆಯದ ಅಥವಾ ಭಾಗಶಃ ಪಡೆದಿರುವ ಗರ್ಭೀಣಿಯರಿಗೆ ಲಸಿಕೆ ನೀಡುವ ತೀವ್ರತರವಾದ ಮಿಷನ್ ಇಂದ್ರಧನುಷ್ ನ ಮೊದಲ ಹಂತದ ಕಾರ್ಯಕ್ರಮಕ್ಕೆ ಆ.7ರ ಬೆಳಗ್ಗೆ 10 ಗಂಟೆಗೆ ಕೃಷ್ಣಾಪುರದ ಐದನೇ ಬ್ಲಾಕ್ ನ ಅಂಗನವಾಡಿ ಕೇಂದ್ರದಲ್ಲಿ ಸ್ಥಳೀಯ ಯುವಕ ಮಂಡಲದ ಸಹಯೋಗದೊಂದಿಗೆ ಚಾಲನೆ ನೀಡಲಾಗುತ್ತದೆ ಎಂದು ಪ್ರಭಾರ ಜಿಲ್ಲಾ ಆರೋಗ್ಯಾಧಿಕಾರಿಯೂ ಆಗಿರುವ ಜಿಲ್ಲಾ ಆರ್ ಸಿ ಎಚ್ ಅಧಿಕಾರಿ ಡಾ. ರಾಜೇಶ್ ಅವರು ಸುದ್ದಿ ಗೋಷ್ಠಿಯಲ್ಲಿಂದುಮಾಹಿತಿ ನೀಡಿದರು.
ದಡಾರ ಮತ್ತು ರುಬೆಲ್ಲ ಅತ್ಯಂತ ವೇಗವಾಗಿ ಹರಡುವ ರೋಗವಾಗಿದ್ದು, ಜ್ವರ ಮತ್ತು ಮೈಯಲ್ಲಿ ನೀರಿಲ್ಲದ ಗುಳ್ಳೆಗಳಾಗು ವುದು ಅದರ ಪ್ರಮುಖ ಲಕ್ಷಣ. ದೇಶದಾದ್ಯಂತ ಪ್ರತಿ ಗುರುವಾರದಂದು ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತವಾಗಿ ವ್ಯಾಕ್ಸಿನನ್ನು ನೀಡಲಾಗುವುದು, ಮಕ್ಕಳಲ್ಲಿ ಹಾಗೂ ಗರ್ಭಾವಸ್ಥೆಯಲ್ಲಿ ಬರುವ 11 ರೋಗಗಳನ್ನು ತಡೆಯುವ ಶಕ್ತಿಯನ್ನು ಈ ಲಸಿಕೆ ಪಡೆದಿದೆ. ಕ್ಷಯ, ರೋಟ ವೈರಸ್, ನಿಮೋನಿಯಾ, ಪೋಲಿಯೋ, ಡಿಪಿಟಿ ಸೇರಿದಂತೆ ಹಲವು ರೋಗಗಳನ್ನು ಈ ಲಸಿಕೆ ತಡೆಯುತ್ತದೆ. ಪೋಲಿಯೋ ನಿರ್ಮೂಲನೆಯಂತೆ ದಡಾರ ಹಾಗೂ ರುಬೆಲ್ಲಾವನ್ನು ನಿರ್ಮೂಲನೆಗೆ ಪ್ರತಿಯೊಬ್ಬರು ಸಹಕರಿಸುವಂತೆ ಅವರು ಕೋರಿದರು.
ಮೊದಲನೆ ಸುತ್ತ ಆ.7ರಿಂದ 12,ಎರಡನೆ ಸುತ್ತು ಸೆ.11ರಿಂದ 16ಮತ್ತು ಮೂರನೆ ಸುತ್ತುಅ.9ರಿಂದ 14ರವರೆಗೆ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನಗರ ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ನೆಹರು ಯುವ ಕೇಂದ್ರ, ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಇತರ ಸಂಘ-ಸಂಸ್ಥೆಗಳು ಸಹಯೋಗದೊಂದಿಗೆ ಈ ಕಾರ್ಯಕ್ರ ಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ವಿಶ್ವ ಆರೋಗ್ಯ ಸಂಸ್ಥೆಯ ಸರ್ವೆಲೆನ್ಸ್ ಮೆಡಿಕಲ್ ಅಧಿಕಾರಿ ಡಾ. ಅನಂತೇಶ್ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ ಉಳ್ಳೆಪಾಡಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.







